ಐಐಟಿ ಕೈತಪ್ಪಿ ನಿರಾಸೆಯಲ್ಲಿದ್ದ ರಾಯಚೂರು ಜಿಲ್ಲೆಗೆ ಐಐಐಟಿ ಭಾಗ್ಯ

IIT-01

ರಾಯಚೂರು ಡಿ.14 : ಐ.ಐ.ಟಿ ಕೈತಪ್ಪಿದ್ದರಿಂದ ನಿರಾಸೆಯಲ್ಲಿದ್ದ ರಾಯಚೂರು ಜಿಲ್ಲೆಗೆ ಈಗ ಐ.ಐ.ಐ.ಟಿ. ಭಾಗ್ಯ ಒಲಿದು ಬರುವ ಸಾಧ್ಯತೆಯಿದೆ. ಹಿಂದುಳಿದ ಪ್ರದೇಶವಾಗಿರುವ ರಾಯಚೂರು ಭಾಗದ ಜನರ ಬಹುದಿನದ ಕನಸು ಈಡೇರತೊಡಗಿದೆ. ರಾಯಚೂರಿನಲ್ಲಿ ಐ.ಐ.ಟಿ.(ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸ್ಥಾಪನೆ ಮಾಡಬೇಕೆಂಬ ಅನೇಕ ವರ್ಷಗಳ ಹೋರಾಟದ ಫಲವಾಗಿ, ಐ.ಐ.ಐ.ಟಿ.(ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ ಫಾರ್ಮೇಷನ್ ಟೆಕ್ನಾಲಜಿ) ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಈ ಕುರಿತು ಭರವಸೆ ನೀಡಿದ್ದಾರೆ. ನಂಜುಂಡಪ್ಪ ವರದಿಯಲ್ಲಿ ರಾಯಚೂರಿಗೆ ಐ.ಐ.ಟಿ. ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.  ಕಳೆದ ವರ್ಷವೇ ರಾಯಚೂರಿಗೆ ಐ.ಐ.ಟಿ. ಮಂಜೂರಾಗಲಿದೆ ಎನ್ನಲಾಗಿತ್ತಾದರೂ, ಕಡೇ ಗಳಿಗೆಯಲ್ಲಿ ಕೈ ತಪ್ಪಿ ಹೋಗಿತ್ತು.

ಹೈ- ಕ ಭಾಗದಲ್ಲಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಆರಂಭಿಸಲು ಕೇಂದ್ರ ಬಿಜೆಪಿ ಸರ್ಕಾರ ಬುಧವಾರ ಘೋಷಣೆ ಮಾಡಿದ್ದು, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕೈತಪ್ಪಿಸಿ ನೀಡಿದ ಕೊಡುಗೆಗೆ ಜಿಲ್ಲೆಯ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗೆ ಸಮವಲ್ಲ. ಹಿಂದುಳಿದ ಜಿಲ್ಲೆ ರಾಯಚೂರಿಗೆ ಐಐಟಿ ನೀಡಿದ್ದರೇ ಜಿಲ್ಲೆಯ ಭೌತಿಕ ಅಭಿವೃದ್ಧಿಗೆ ನೆರವಾಗುತ್ತಿತ್ತು ಆದರೆ ಐಐಐಟಿಯು ಕೇವಲ ರಾಷ್ಟ್ರೀಯ ಸಂಸ್ಥೆಯಾಗಿದೆಯೇ ಹೊರತು ಅದರಿಂದ ಈ ಭಾಗದ ಜನರಿಗೆ ಏನು ಲಾಭ. ಐಐಟಿ ಕೈ ತಪ್ಪಿಸಿರುವ ಬಿಜೆಪಿಯ ರಾಜ್ಯ ಮತ್ತು ಕೇಂದ್ರದ ನಾಯಕರು ಜಿಲ್ಲೆಯ ಜನರ ಮೂಗಿಗೆ ತುಪ್ಪ ಹಚ್ಚುವುದಕ್ಕಾಗಿ ಐಐಐಟಿ ನೀಡಿದ್ದಾರೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin