ಐತಿಹಾಸಿಕ ಸರಣಿ ಗೆಲುವು : ಕೆರೀಬಿಯನ್ನರ ವಿರುದ್ಧ 2 ಟೆಸ್ಟ್ ಗೆಲ್ಲಿಸಿದ ಮೊದಲ ಕ್ಯಾಪ್ಟನ್ ಕೊಹ್ಲಿ

Virat

ಸೆಂಟ್ ಲೂಸಿಯಾ, ಆ.14: ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ವೆಸ್ಟ್‌ಇಂಡೀಸ್ ದೂಳಿಪಟವಾಗಿದ್ದು, ವಿರಾಟ್ ಪಡೆ ಮತ್ತೊಂದು ಭಾರಿ ಅಂತರದ ಗೆಲುವು ಸಾಧಿಸಿದೆ. ಡರ್ರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 237 ರನ್ ಅಂತರದಿಂದ ಸೋಲಿಸಿ, ನಾಲ್ಕು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು. 346 ರನ್ಗಳ ಗೆಲುವಿನ ಗುರಿ ಪಡೆಡಿದ್ದ ವೆಸ್ಟ್‌ಇಂಡೀಸ್ 108 ರನ್ಗಳಿಗೆ ಆಲೌಟ್ ಆಯಿತು.
ಆಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತ ಇನಿಂಗ್ಸ್ ಹಾಗೂ 92 ರನ್ನುಗಳ ಅಂತರದಿಂದ ಗೆದ್ದರೆ, ಕಿಂಗ್ಸ್ಟನ್ ಜಮೈಕಾದಲ್ಲಿ ನಡೆದ ಎರಡನೇ ಟೆಸ್ಟ್ ಡ್ರಾಗೊಂಡಿತ್ತು. ಕೊನೆಯ ಟೆಸ್ಟ್ ಈ ತಿಂಗಳ 18ರಿಂದ ನಡೆಯಲಿದೆ.
ಭಾರತದ ಪರ ಮುಹಮ್ಮದ್ ಶಮಿ (3/15) ಯಶಸ್ವಿ ಬೌಲರ್ ಎನಿಸಿಕೊಂಡರು. ಉಳಿದಂತೆ ಇಶಾಂತ್ ಶರ್ಮಾ (2/30) ಹಾಗೂ ರವೀಂದ್ರ ಜಡೇಜಾ (2/20) ಕೂಡಾ ಗೆಲುವಿಗೆ ಕೊಡುಗೆ ನೀಡಿದರು. ವೆಸ್ಟ್ ಇಂಡೀಸ್ ಪರ ಡರ್ರೆನ್ ಬ್ರಾವೊ (59) ಅವರಷ್ಟೇ ಪ್ರತಿರೋಧ ತೋರಿದರು.  ವಿಂಡೀಸ್ನಲ್ಲಿ 2 ಪಂದ್ಯ ಗೆದ್ದ ಮೊದಲ ನಾಯಕನೆಂಬ ಕೀರ್ತಿಗೆ ನಾಯಕ ವಿರಾಟ್ ಕೊಹ್ಲಿ ಪಾತ್ರರಾದ್ರು. ಉತ್ತಮ ಆಲ್ರೌಂಡ್ ಆಟ ಪ್ರದರ್ಶಿಸಿದ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

ಸಂಕ್ಷಿಪ್ತ ಸ್ಕೋರ್:

ಭಾರತ 353 ಮತ್ತು 217/7 (ಅಜಿಂಕ್ಯ ರೆಹಾನೆ 78 ನಾಟೌಟ್). ವೆಸ್ಟ್‌ಇಂಡೀಸ್: 225 ಮತ್ತು 108.

► Follow us on –  Facebook / Twitter  / Google+

Sri Raghav

Admin