ಐವರು ದರೋಡೆಕೋರರ ಸೆರೆ : 8ಲಕ್ಷ ಮೌಲ್ಯದ ಮೊಬೈಲ್, ಲ್ಯಾಪ್‍ಟಾಪ್, ಚಿನ್ನಾಭರಣ ವಶ

Spread the love

Arrested-01

ಬೆಂಗಳೂರು, ನ.3- ರಾತ್ರಿ ವೇಳೆ ಒಂಟಿಯಾಗಿ ಸಂಚರಿಸುವವರನ್ನು ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಮೊಬೈಲ್ ಚಿನ್ನಾಭರಣ ದೋಚುತ್ತಿದ್ದ ಐವರು ಕುಖ್ಯಾತ ದರೋಡೆಕೋರರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 8ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್‍ಟಾಪ್ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಹೊಸಕೆರೆಹಳ್ಳಿ ಹೃಷಿಕೇಶಿನಗರದ ಕಾಂತರಾಜು ಅಲಿಯಾಸ್ ಕಾಂತ (19), ಇಟ್ಟಮಡುವಿನ ಮಂಜುನಾಥನಗರ ನಿವಾಸಿಗಳಾದ ವಿನಯ್ ಅಲಿಯಾಸ್ ಬ್ರೂಸ್ಲಿ (19), ಹರೀಶ್‍ಕುಮಾರ್ ಅಲಿಯಾಸ್ ಹರೀಶ್(19), ಹೊಸಕೆರೆಹಳ್ಳಿಯ ಸಂಜಯ್ ಅಲಿಯಾಸ್ ಕೆಂಚ (20) ಹಾಗೂ ವೀರಭದ್ರನಗರದ ಶೇಖರ್ ಅಲಿಯಾಸ್ ತಿಪ್ಪೆ (20) ಬಂಧಿತ ದರೋಡೆಕೋರರು.

ಆರೋಪಿಗಳು ಹನುಮಂತನಗರ, ಜೆ.ಪಿ.ನಗರ, ಆಡುಗೋಡಿ, ಆರ್.ಆರ್.ನಗರ, ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸಂಬಂಧಿಸಿದಂತೆ ರಾಬರಿ, ಡಕಾಯಿತಿ ಸೇರಿ ಒಟ್ಟು 12 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.ಬಂಧಿತರಿಂದ 8 ಲಕ್ಷ ರೂ. ಬೆಲೆಯ 62 ಮೊಬೈಲ್, ಒಂದು ಲ್ಯಾಪ್‍ಟಾಪ್, 80 ಗ್ರಾಂ ತೂಕದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ್ದ 4 ದ್ವಿಚಕ್ರವಾಹನ, ಚಾಕು, ಎರಡು ಮಚ್ಚು ಹಾಗೂ ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಚಾಮರಾಜಪೇಟೆ ಉಪವಿಭಾಗದ ಸಹಾಯಕಪೊಲೀಸ್ ಕಮೀಷನರ್ ಮಹಾಂತರೆಡ್ಡಿ ನೇತೃತ್ವದಲ್ಲಿ ಹನುಮಂತನಗರ ಠಾಣೆಯ ಇನ್ಸ್‍ಪೆಕ್ಟರ್ ಕೆ.ಎಚ್.ದಿಲೀಪ್‍ಕುಮಾರ್, ಪಿಎಸ್‍ಐ ಶರಣಮ್ಮ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin