ಒಂದೂವರೆ ಲಕ್ಷ ಬೆಲೆಯ ಬಲೀ..ಕಾ.ಬಕ್ರಾ,
ಬೆಳಗಾವಿ,ಸೆ.12- ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರಿ ಮತ್ತು ಆಡಿಗೆ ಎಲ್ಲಿಲ್ಲದ ಬೆಲೆ. ಇದನ್ನು ಗಮನದಲ್ಲಿಟ್ಟುಕೊಂಡು ಗೋಕಾಕ ತಾಲೂಕಿನ ಪಿಜಿ ಮಲ್ಲಾಪೂರ ಗ್ರಾಮದ ರೈತನೊಬ್ಬ ಸಾಕಿದ ಕಮಲಾಪುರಿ ಜಾತಿಯ ಕುರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದರ ಮಾರಾಟಕ್ಕೆ ರೈತ ನಡೆಸಿದ ಬಹಿರಂಗ ಸವಾಲ್ನಲ್ಲಿ ಒಂದು ಲಕ್ಷ 20 ಸಾವಿರ ರೂ.ದರ ಫಿಕ್ಸ್ ಆದರೂ ಅದು ಮಾರಾಟವಾಗಿಲ್ಲ. ತಾನು ಸಾಕಿದ ಮಹಾಕುರಿಗೆ ಒಂದೂವರೆ ಲಕ್ಷದರ ಬಂದರೆ ಮಾತ್ರ ಕುರಿ ಮಾರಾಟ ಮಾಡುತ್ತೇನೆ ಅಂತಾರೆ ಮಲ್ಲಪ್ಪರಾಮಪ್ಪಚಲ್ಲಾಯಿ. ಹದಿನೇಳು ವರ್ಷದ ಹಿಂದೆ ಈ ರೈತ ಉತ್ತರ ಭಾರತದಿಂದ ಕಮಲಾಪುರಿಯ ಜಾತಿ ಕುರಿಯೊಂದನ್ನು ತಂದು ಸಾಕಿದ್ದರು. ಅದರಕುರಿಮರಿಯನ್ನು ಸಾಕಿ ಪ್ರತಿ ವರ್ಷ ಮಾರಾಟ ಮಾಡುತ್ತಾರೆ.
ಈ ಹರಕೆಯಕುರಿ ಮೂರನೇ ಪೀಳಿಗೆಯದ್ದಾಗಿದೆ. ಸುಮಾರು 120 ಕೆಜಿತೂಗುತ್ತಿರುವ ಇದು ಉತ್ಕಷ್ಟ ಮತ್ತುದಷ್ಟಪುಷ್ಟತೆಯಿಂದ ನೋಡಲು ಮಹಾದಾನಂದ ನೀಡುತ್ತದೆ.ವೀರ್ಯ ಮಾರಾಟ:ಈ ರೈತ ಕೇವಲ ಕುರಿ ಮಾತ್ರ ಮಾರಾಟ ಮಾಡುವದಿಲ್ಲ.ಅದರವೀರ್ಯ ಮಾರಾಟ ಮಾಡಿ ಪ್ರತಿ ವರ್ಷಒಂದು ಲಕ್ಷರೂ. ಗಳಿಸುತ್ತಾರೆ. ಈಗ ಸದ್ಯಕ್ಕೆ ಈ ರೈತನ ಬಳಿ ಎರಡು ಕುರಿಗಳಿದ್ದು ಒಂದನ್ನು ಮಾರಾಟ ಮಾಡಿಇನ್ನೊಂದುಕುರಿಯನ್ನು ವಂಶಾವಳಿ ಮುಂದುವರೆಸಲು ಸಾಕುತ್ತಿದ್ದಾರೆ. ಅದೂ ಸಹ ಮುಂದಿನ ಬಕ್ರೀದ್ ಹಬ್ಬಕ್ಕೆ ಮಾರಾಟವಾಗುವುದು.ಮುಸ್ಲಿಂ ಸಮಾಜದಲ್ಲಿಯಾರು ಬಲಿಷ್ಠವಾದಕುರಿಯನ್ನು ಬಲಿ ಕೊಡುತ್ತಾರೆಯೋಅವರಿಗೆ ಸಮಾಜದಲ್ಲಿ ವಿಶೇಷ ಗೌರವ. ಹೀಗಾಗಿ ಮಹಾಕುರಿಯನ್ನು ಖರೀದಿಸಿ ಹೆಮ್ಮೆ ವ್ಯಕ್ತಪಡಿಸುವವರಿಗೆ ಕೊರತೆಇಲ್ಲ. ಹೀಗಾಗಿ ಬಲೀ ಕಾ ಬಕ್ರಾಆದ್ರೂ ಬೆಲೆ ದುಬಾರಿಯಾಗಿ ಗಮನ ಸೆಳೆದಿದೆ.
► Follow us on – Facebook / Twitter / Google