ಒಂಭತ್ತು ಮಂದಿ ಬಂಧನ
ಮೈಸೂರು,ಸೆ.15-ಸಿಸಿಬಿ ಮತ್ತು ಲಷ್ಕರ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೊಬೈಲ್ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಒಂಭತ್ತು ಮಂದಿಯನ್ನು ಬಂಧಿಸಿದ್ದಾರೆ. ಲಷ್ಕರ್ ಮೊಹಲ್ಲಾದ ದಿನೇಶ್ ಕುಮಾರ್(30), ಫೆಮಾರಾಮ್(22), ವಿಕ್ರಮ್ ಕುಮಾರ್(19), ಬಲವಂತ್ ಸಿಂಗ್(23), ಪ್ರಕಾಶ್ ಕುಮಾರ್(20), ಒಬಿಸಿಮ್(38), ಮಹೇಂದ್ರ ಸಿಂಗ್(22), ಕೆ.ಟಿ.ಸ್ಟ್ರೀಟ್ ವಾಸಿ ಆಶೂಸಿಂಗ್(19), ಓಂಸಿಂಗ್(21) ಬಂಧಿತ ಆರೋಪಿಗಳು. ಅಕ್ರಮವಾಗಿ ಇನ್ಟೆಕ್ಸ್ ಮೊಬೈಲ್ ಕಂಪನಿಗಳ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ನಗರದ ಕೆ.ಟಿ.ಸ್ಟ್ರೀಟ್ ರಸ್ತೆಯಲ್ಲಿರುವ ಮದನ್ ಆಸ್ಕ್ ಸರೀಫ್, ಕೈವೆ ಮೊಬೈಲ್ ಅಂಗಡಿಗಳ ಮೇಲೆ ಸಿಸಿಬಿ ಮತ್ತು ಲಷ್ಕರ್ ಠಾಣೆ ಪೊಲೀಸರು ದಾಳಿ ನಡೆಸಿ, ಅಂಗಡಿ ಮಾಲೀಕರು ಮತ್ತು ಕೆಲಸಗಾರರನ್ನು ಬಂಧಿಸಿ ಇನ್ಟೆಕ್ಸ್ ಮೊಬೈಲ್ ಕಂಪನಿಯ 40 ಸಾವಿರ ರೂ.ಗಳ ನಕಲಿ ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
► Follow us on – Facebook / Twitter / Google+
Facebook Comments