ಒಡಿಶಾದಲ್ಲಿ ಸಿಡಲಿನ ಆರ್ಭಟಕ್ಕೆ 11 ಮಂದಿ ಬಲಿ
ಭುವನೇಶ್ವರ, ಜು.31-ಒಡಿಶಾದ ಭದ್ರಾಕ್, ಬಾಲಸೋರ್ ಮತ್ತು ಕೇಂದ್ರಪಾರ ಜಿಲ್ಲೆಗಳಲ್ಲಿ ಸಿಡಿಲಿನ ಆರ್ಭಟಕ್ಕೆ 11 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಭದ್ರಾಕ್ನಲ್ಲಿ ಐವರು ಹಾಗೂ ಬಾಲಸೋರ್ ಮತ್ತು ಕೇಂದ್ರಪಾರ ಜಿಲ್ಲೆಯಲ್ಲಿ ತಲಾ ಮೂವರು ಬಲಿಯಾಗಿದ್ದಾರೆ ಎಂದು ಜಿಲ್ಲಾ ತುರ್ತು ನಿರ್ವಹಣಾ ಅಧಿಕಾರಿ ರಾಜೇಂದ್ರ ಪಾಂಡಾ ತಿಳಿಸಿದ್ದಾರೆ. ಸಿಡಿಲಿನ ಆಘಾತದಿಂದ ಗಾಯಗೊಂಡಿರುವ ಇತರ 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >