ಒತ್ತಡದ ಬದುಕಿನಿಂದಾಗಿ ದೇಶದ ಪ್ರತಿ 20 ಜನರಲ್ಲಿ ಒಬ್ಬರಿಗೆ ಖಿನ್ನತೆ ಸಮಸ್ಯೆ
ಆಧುನಿಕ ಜಂಜಾಟ ಮತ್ತು ಒತ್ತಡದ ಬದುಕಿನಿಂದಾಗಿ ದೇಶದ ಪ್ರತಿ 20 ಜನರಲ್ಲಿ ಒಬ್ಬರು ಖಿನ್ನತೆಯಿಂದ ನರಳುತ್ತಿದ್ದಾರೆ. 2016ರಲ್ಲಿ 10.6 ಲಕ್ಷಕ್ಕೂ ಅಕ ಜನರು ಖಿನ್ನತೆ ಮತ್ತು ಹತಾಶೆ ಸಮಸ್ಯೆಯಿಂದ ಬಳಸುತ್ತಿದ್ದಾರೆ-ಇದು ನಿಮ್ಹಾನ್ಸ್ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್) ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿರುವ ಆತಂಕಕಾರಿ ಅಂಕಿ-ಅಂಶಗಳಾಗಿವೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಖಿನ್ನತೆಗೆ ಸಂಬಂಸಿದ ಸಮಸ್ಯೆಗಳಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2016ಕ್ಕಿಂತ 2015ರಲ್ಲಿ ಖಿನ್ನತೆ ನಿವಾರಣೆಗೆ ಔಷಗಳನ್ನು ಬಳಸಿದ ರೋಗಿಗಳ ಸಂಖ್ಯೆ 10.6 ಲಕ್ಷಗಳಷ್ಟು ಹೆಚ್ಚಾಗಿದೆ.
2015ರಲ್ಲಿ ವೈದ್ಯರು 3.46 ಕೋಟಿ ಮಂದಿಗೆ ಔಷಧಗಳನ್ನು ಬರೆದುಕೊಟ್ಟಿದ್ದರು. 2016ರಲ್ಲಿ ಈ ಸಂಖ್ಯೆಯು ಶೇ.14ರಷ್ಟು ಹೆಚ್ಚಾಗಿದೆ. ಹೊಸ ರೋಗಿಗಳೂ ಸೇರ್ಪಡೆಯಾಗಿರುವ ಪ್ರಮಾಣವೂ ವೃದ್ದಿಯಾಗಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ. ಇಷ್ಟು ಪ್ರಮಾಣದಲ್ಲಿ ರೋಗಿಗಳಿಗೆ ಮಾನಸಿಕ ರೋಗ ತಜ್ಞರು ಔಷ ಮಾತ್ರೆಗಳನ್ನು ಬರೆದು ಕೊಡುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಖಿನ್ನತೆ, ಹತಾಶೆ, ಮಾನಸಿಕ ಕ್ಷೋಭೈ ಸೇರಿದಂತೆ ವಿವಿಧ ಸಮಸ್ಯೆಗಳಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಸಾಬೀತಾಗಿದೆ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎಸ್.ಗಂಗಾಧರ್ ಹೇಳಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS