ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಸಲು ನಾನಾ ಕಸರತ್ತು ಫಲಿತಾಂಶ ಮಾತ್ರ ಶೂನ್ಯ…!

exam

ದಾವಣಗೆರೆ, ಮಾ.11– ಇದು ವಿಚಿತ್ರವೋ… ವಿಪರ್ಯಾಸವೋ… ಗೊತ್ತಿಲ್ಲ. ಒಬ್ಬೇ ಒಬ್ಬ ವಿದ್ಯಾರ್ಥಿಗಾಗಿ ಪರೀಕ್ಷಾ ಕೇಂದ್ರ ತೆರೆದು ಹತ್ತಾರು ಅಧಿಕಾರಿಗಳನ್ನು ನೇಮಿಸಿದರೂ ಪ್ರಯೋಜನ ಮಾತ್ರ ಶೂನ್ಯ. ಇಂತಹ ವಿಚಿತ್ರ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೊಠಡಿಯಲ್ಲಿ..!  ದ್ವಿತೀಯ ಪಿಯುಸಿಯ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ಇಂದು ನಡೆಯಿತು. ಇಲ್ಲಿ ಇಡೀ ತಾಲೂಕಿನಲ್ಲಿರುವ ಒಬ್ಬನೇ ಒಬ್ಬ ಪುನರಾವರ್ತಿತ ವಿದ್ಯಾರ್ಥಿ ರಾಘವೇಂದ್ರ ಕುಮಾರ್ ಸುಸೂತ್ರವಾಗಿ ಪರೀಕ್ಷೆ ಬರೆಯಲೆಂದು ಪೊಲೀಸ್ ಅಧಿಕಾರಿಗಳ ಭದ್ರತೆಯಲ್ಲಿ ಉಪನ್ಯಾಸಕರು ಭದ್ರತೆಯಲ್ಲಿ ಒಂದೇ ಒಂದು ಪ್ರಶ್ನೆ ಪತ್ರಿಕೆ ತಂದ್ದಿದ್ದರು. ಇದು ಭಾರೀ ಕುತೂಹಲ ಕೆರಳಿಸಿತು.

ಹೋದರೆ ಹೋಗಲಿ, ಆ ವಿದ್ಯಾರ್ಥಿ ಬಂದು ಪರೀಕ್ಷೆ ಬರೆಯುತ್ತಾನೆ ಎಂದರೆ ಆತನೂ ಕೂಡ ಅದೇಕೋ ಗೈರು ಹಾಜರಾಗಿದ್ದಾನೆ.ನಿನ್ನೆ ಮಧ್ಯಾಹ್ನದಿಂದಲೇ ಎಲ್ಲ ಸಿದ್ಧತೆ ಮಾಡಿಕೊಂಡು ಈತನಿಗಾಗಿ ಇಂದು ಬೆಳಗ್ಗೆ 11 ಗಂಟೆವರೆಗೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಕಾದು ಕುಳಿತು ಕೊನೆಗೆ ಸಪ್ಪೆ ಮುಖ ಹಾಕಿಕೊಂಡು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಖಾಲಿ ಹಾಳೆ ಇಟ್ಟುಕೊಂಡು ಬಂದ ಕಾರಿನಲ್ಲೇ ವಾಪಸ್ ತೆರಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin