ಒಲಿಂಪಿಕ್ಸ್ ಗೆ ಐದು ಹೊಸ ಕ್ರೀಡೆಗಳು ಸೇರ್ಪಡೆ

afsdhadfhdhಲಾಸನ್ನೆ, ಸ್ವಿಡ್ಜರ್‍ಲ್ಯಾಂಡ್, ಆ.4–  ವಿಶ್ವದ ಕ್ರೀಡಾಪಟುಗಳ ವೇದಿಕೆ ಎಂದೇ ಖ್ಯಾತವಾಗಿರುವ 2020 ರ ಒಲಿಂಪಿಕ್ಸ್ 5 ಹೊಸ ಕ್ರೀಡೆಗಳು ಸೇರ್ಪಡೆಯಾಗಿವೆ .   ಈಗ ಮತ್ತೊಂದು ಹೊಸ ವಿಷಯವೇನೆಂದರೆ   ಒಲಿಂಪಿಕ್ಸ್ ಗೆ 5 ಹೊಸ ಆಟಗಳು ಸೇರ್ಪಡೆಯಾಗುತ್ತಿವೆ. ಅವು ಬೇಸ್‍ಬಾಲ್ ಕರಾಟೆ, ಸ್ಕೇಟ್ಬೋರ್ಡ್ (ಜಾರು ಹಲಗೆಯಲ್ಲಿ ಸವಾರಿ ಮಾಡುವುದು), ಕ್ಲೈಂಬಿಂಗ್ ಹಾಗೂ ಸರ್ಫಿಂಗ್ (ತೆರೆ ಮರೆಯಲ್ಲಿ ಆಡುವುದು). ಆದರೆ ಈ 5 ಆಟಗಳು ಬ್ರೆಜಿಲ್‍ನ ರಿಯೋ ಡಿ ಜನೈರೊ ದಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್ ಗೆ ಅನ್ವಯವಾಗುವುದಿಲ್ಲ.  ಮುಂದಿನ 32ನೇ ಒಲಿಂಪಿಕ್ ಕ್ರೀಡಾಕೂಟ ನಡೆಯುವ ಟೊಕಿಯೋದಲ್ಲಿ ಅಂದರೆ 2020ರಲ್ಲಿ. ಸೇರ್ಪಡೆಯಾಗಲಿವೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಈ 5 ಹೊಸ ಆಟಗಳಿಗೆ ಸಮ್ಮತಿ ನೀಡಿದೆ. ನೂತನ ಆಟಗಳನ್ನು ಆರಂಭಿಸಲು ಐಒಸಿಗೆ 2015 ಸೆಪ್ಟಂಬರ್‍ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯುವಕರನ್ನು ಹುರಿದುಂಬಿಸಲು ಈ ಹೊಸ ಆಟಗಳನ್ನು ಆರಂಭಿಸುತ್ತಿದ್ದೇವೆ. ಇದರಿಂದ ಯುವ ಜನರಿಗೆ ಹೆಚ್ಚು ಅವಕಾಶ ಸಿಗಲಿದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್ ತಿಳಿಸಿದ್ದಾರೆ.  ನೂತನ 5 ಕ್ರೀಡೆಗಳಿಂದ ವಿಶ್ವದಾದ್ಯಂತ 474 ಕ್ರೀಡಾಳುಗಳಿಗೆ ಅವಕಾಶ ಸಿಗಲಿದೆ. ಒಲಿಂಪಿಕ್ಸ್‍ನಲ್ಲಿ ಈಗಾಗಲೆ 28 ಆಟಗಳು ಚಾಲ್ತಿಯಲ್ಲಿವೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Sri Raghav

Admin