ಓಬವ್ವ, ಮದಕರಿ ನಾಯಕನನ್ನು ಕೊಂದ ಟಿಪ್ಪುನ ಜಯಂತಿ ಏಕೆ ಮಾಡಬೇಕು..?

Pratap

ಚಿತ್ರದುರ್ಗ,ನ.8-ಐತಿಹಾಸಿಕ ಕೋಟೆಯ ಮೇಲೆ ದಾಳಿ ನಡೆಸಿ ವೀರವನಿತೆ ಒನಕೆ ಓಬವ್ವನನ್ನು ಚೂರಿಯಿಂದ ಇರಿದ ಹೈದರಾಲಿಯ ಮಗ, ಮದಕರಿ ನಾಯಕನನ್ನು ವಿಷ ಹಾಕಿ ಸಾಯಿಸಿದ ಟಿಪ್ಪು ಸುಲ್ತಾನರ ಜಯಂತಿಯನ್ನು ನಾವು ಏಕೆ ಮಾಡಬೇಕು ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಚಿತ್ರದುರ್ಗದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು ನಾವು ಕಳೆದ ಮೂರು ವರ್ಷಗಳಿಂದಲೂ ಶಾಂತಿಯುತವಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾ ಬಂದಿದ್ದೇವೆ. ಆದರೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಟಿಪ್ಪು ಜಯಂತಿ ಆಚರಿಸುತ್ತಿದೆ. ಕನ್ನಡ ಸಂಸ್ಕøತಿ ಇಲಾಖೆಗೆ ಟಿಪ್ಪು ನೀಡಿದ ಕೊಡುಗೆ ಏನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಬೇಕು ಎಂದಿದ್ದಾರೆ.

 

Sri Raghav

Admin