ಓವರ್‍ಟೇಕ್ ತಂದ ಆಪತ್ತು : ಬೈಕ್ ಸವಾರ ಮತ್ತು ಮಹಿಳೆ ಸಾವು

Spread the love

Accident-Car-Bike

ಕೊರಟಗೆರೆ,ನ.24-ಸಿಮೆಂಟ್ ಲಾರಿಯನ್ನು ಓವರ್‍ಟೇಕ್ ಮಾಡಲು ಹೋದ ಕಾರೊಂದು ರಸ್ತೆಬದಿಯ ಸೇತುವೆಗೆ ಡಿಕ್ಕಿ ಹೊಡೆದು ಎದುರಿಗೆ ಬಂದ ಬೈಕ್‍ಗೆ ಅಪ್ಪಳಿಸಿದ ಪರಿಣಾಮ ರಸ್ತೆಬದಿ ನಿಂತಿದ್ದ ಮಹಿಳೆ ಸೇರಿದಂತೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಜಿ.ನಾಗೇನಹಳ್ಳಿ ಕ್ರಾಸ್ ಬಳಿ ಇಂದು ಮುಂಜಾನೆ ಸಂಭವಿಸಿದೆ. ಶ್ರೀನಿವಾಸ್(50), ಮುದ್ದಮ್ಮ , ಮೃತಪಟ್ಟ ದುರ್ದೈವಿಗಳು.  ಬೆಂಗಳೂರು ಕಡೆಯಿಂದ ಮಧುಗಿರಿ ಕಡೆಗೆ ತೆರಳುತ್ತಿದ್ದ ಕಾರು ಮುಂದೆ ಚಲಿಸುತ್ತಿದ್ದ ಸಿಮೆಂಟ್ ಲಾರಿಯನ್ನು ಓವರ್‍ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಸೇತುವೆಗೆ ಡಿಕ್ಕಿ ಹೊಡೆದು ನಂತರ ಎದುರಿಗೆ ಬಂದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಾಲು ಕೊಳ್ಳಲು ರಸ್ತೆಬದಿ ನಿಂತಿದ್ದ ಮುದ್ದಮ್ಮನ ಮೇಲೂ ಕಾರು ಹರಿದಿದ್ದರಿಂದ ಇವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಾಗೇನಹಳ್ಳಿಯ ನಾರಾಯಣಪ್ಪ ಮತ್ತು ಗೊಲ್ಲರಹಟ್ಟಿಯ ದೊಡ್ಡಯ್ಯ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಾರು ಚಾಲಕರನ್ನು ವಶಕ್ಕೆ ಪಡೆದುಕೊಂಡಿರುವ ಕೊರಟಗೆರೆ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಕೊರಟಗೆರೆ ಠಾಣೆಯ ಸಿಪಿಐ ಮುನಿರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin