ಔರಂಗಾಬಾದ್’ನಲ್ಲಿ ಶಿಕ್ಷಕರ ಪ್ರತಿಭಟನೆ ವೇಳೆ ಹಿಂಸಾಚಾರ : ಓರ್ವ ಪೇದೆ ಸಾವು, 100 ಮಂದಿಗೆ ಗಾಯ

Polcie-01

ಔರಂಗಾಬಾದ್, ಅ.5-ಅನುದಾನರಹಿತ ಶಾಲೆಗಳ ಶಿಕ್ಷಕರು ಕೈಗೊಂಡ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಪೇದೆ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಇಲ್ಲಿ ನಡೆದಿದೆ.  ಔರಾಂಗಬಾದ್ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿತ್ತು. ಈ ಸ್ಥಳದ ಬಳಿ ಜಮಾಯಿಸಿದ್ದ ಅನುದಾನರಹಿತ ಶಾಲೆಗಳ ಶಿಕ್ಷಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಉದ್ರಿಕ್ತ ಗುಂಪೊಂದು ಪೊಲೀಸರತ್ತ ಕಲ್ಲುಗಳನ್ನು ತೂರಿತು. ಕಲ್ಲು ತೂರಾಟ ಮತ್ತು ಘರ್ಷಣೆಯಲ್ಲಿ ಪೊಲೀಸ್ ಪೇದೆ ರಾಹುಲ್ ಕಾಂಬ್ಳಿ (50) ಮೃತಪಟ್ಟು ಇತರ 9 ಪೊಲೀಸರು ಗಾಯಗೊಂಡರು.

ಗಲಭೆಕೋರರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರ ಮತ್ತು ಆಶ್ರುವಾಯು ಪ್ರಯೋಗದಲ್ಲಿ ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಲಭೆ ಸಂಬಂಧ 35 ಜನರನ್ನು ಬಂಧಿಸಲಾಗಿದೆ.  ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರಾಜಕೀಯ ಪಕ್ಷಗಳು ಪೊಲೀಸರ ಮೇಲೆ ಆಕ್ರಮಣ ನಡೆಸಲು ಒಂದು ಗುಂಪಿಗೆ ಪ್ರಚೋದನೆ ನೀಡಿತು. ಇದರಿಂದ ಹಿಂಸಾಚಾರ ಭುಗಿಲೆದ್ದು ಸಾವು-ನೋವು ಉಂಟಾಯಿತು ಎಂದು ಶಿಕ್ಷಕರು ಆರೋಪಿಸಿದ್ದಾರೆ. ಎನ್ಸಿಪಿ ಶಾಸಕರುಗಳಿಗೆ ಘೇರಾವ್ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

► Follow us on –  Facebook / Twitter  / Google+

Sri Raghav

Admin