ಕಂಬಳಕ್ಕೆ ಅಧಿಕೃತ ಮಾನ್ಯತೆ ನೀಡಲು ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ

Spread the love

Kambala--01

ಬೆಂಗಳೂರು, ಫೆ.10-ಜಲ್ಲಿಕಟ್ಟು ಮಾದರಿಯಲ್ಲಿ ಕಂಬಳಕ್ಕೆ ಅಧಿಕೃತ ಮಾನ್ಯತೆ ನೀಡಲು ರಾಜ್ಯಸರ್ಕಾರ ವಿಧೇಯಕವೊಂದನ್ನು ವಿಧಾನಸಭೆಯಲ್ಲಿಂದು ಮಂಡಿಸಿ ಅಂಗೀಕಾರ ಪಡೆಯಲಾಯಿತು.  ಪ್ರಾಣಿ ಹಿಂಸೆ ತಡೆಗಟ್ಟುವ (ಕರ್ನಾಟಕ ತಿದ್ದುಪಡಿ 2017 ವಿಧೇಯಕ) ಕಾಯ್ದೆ 1968ರಲ್ಲಿ ಜಾರಿಯಾಗಿತ್ತು. ಹೋರಿಗಳ ಓಟ, ಎತ್ತಿನಗಾಡಿ ಓಟವನ್ನು ರಾಜ್ಯದ ಸಂಪ್ರದಾಯ, ಸಂಸ್ಕøತಿಯಂತೆ ಹೋರಿ ಅಥವಾ ಎತ್ತನ್ನು ಮರದ ನೊಗ ಅಥವಾ ಗಾಡಿ ಓಟ ಎಂದು ಯಾವುದೇ ಹೆಸರಿನಿಂದ ನಡೆಸಬೇಕು. ಇದೇ ಮಾದರಿಯಲ್ಲಿ ಕಂಬಳ ಕ್ರೀಡೆಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ 28ನೆ ಅಧಿನಿಯಮವನ್ನು ಸೇರಿಸಲಾಗಿದೆ. ಕಂಬಳ ಹೋರಿ ಓಟ, ಎತ್ತಿನ ಓಟ ಉಳಿಸಿಕೊಳ್ಳಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

1968ಕ್ಕೂ ಹಿಂದೆ ಪ್ರಾಣಿಗಳಿಗೆ ಅನಗತ್ಯ ತೊಂದರೆ ನೀಡದಿರಲು ಜಾರಿಗೆ ತರಲಾಗಿದ್ದ ಈ ಅಧಿನಿಯಮಕ್ಕೆ ಅನ್ವಯಿಸುವಂತೆ ವಿನಾಯಿತಿ ಅವಶ್ಯಕ ಎಂಬುದನ್ನು ಗುರುತಿಸಿ ದೇಸಿ ಜಾನುವಾರು ತಳಿಗಳನ್ನು ಉಳಿಸಿ, ಬೆಳೆಸಿಕೊಳ್ಳಲು ಕಂಬಳ ಹಾಗೂ ಹೋರಿ ಸ್ಪರ್ಧೆ ಪ್ರಮುಖ ಪಾತ್ರ ವಹಿಸುತ್ತವೆ ಎನ್ನಲಾಗಿದೆ. ಇಂದು ವಿಧಾನಸಭೆಯಲ್ಲಿ ಸಚಿವ ಎ.ಮಂಜು ಈ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin