ಕಟ್ಟಾ ಉಗ್ರಗಾಮಿ ಡ್ಯಾನಿಶ್ ಅಹಮ್ಮದ್ ಶರಣಾಗತಿ

Danish-Ahamad--101

ಹಂದ್ವಾರ,ಜೂ.7-ಜಮ್ಮುಕಾಶ್ಮೀರ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಉಪಟಳ ಹೆಚ್ಚಿರುವಂತೆಯೇ ಡ್ಯಾನಿಶ್ ಅಹಮ್ಮದ್ ಎಂಬ ಕಟ್ಟಾ ಉಗ್ರನೊಬ್ಬ ಇಂದು ಹಂದ್ವಾರ ಜಿಲ್ಲಾ ಪೊಲೀಸ್ ಮತ್ತು 21 ರಾಷ್ಟ್ರೀಯ ರೈಫಲ್ಸ್ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗತನಾಗಿದ್ದಾನೆ.   ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್(ಎಚ್‍ಎಂ) ಕಮಾಂಡರ್ ಶಬ್ಸಾರ್ ಭಟ್ ಅಂತ್ಯ ಸಂಸ್ಕಾರದ ಸಂದರ್ಭ ಆ ಕಾರ್ಯಕ್ರಮದಲ್ಲಿ ಡ್ಯಾನಿಶ್ ಅಹಮ್ಮದ್ ಕಾಣಿಸಿಕೊಂಡಿದ್ದ.   ಆಗ ಈ ವಿಡಿಯೋ ಕಾಶ್ಮೀರದ ಟ್ರಾಲ್ ಮತ್ತು ಅವಂತಿಪುರ ಪ್ರದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.ಪ್ರಸ್ತುತ ಶರಣಾಗತನಾಗಿರುವ ಡ್ಯಾನಿಶ್ ಅಹಮ್ಮದ್ ಡೆಹ್ರಡೂನ್‍ನ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ. 2016ರಲ್ಲಿ ಹಂದ್ವಾರದಲ್ಲಿ ನಡೆದ ಪ್ರತಿಭಟನೆ ವೇಳೆ ಡ್ಯಾನಿಶ್ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದ.   ಆ ಸಂದರ್ಭ ಪೊಲೀಸರು ಅವನನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ನಂತರ ಡ್ಯಾನಿಶ್ ಉಗ್ರರ ಸಂಘ ಬೆಳೆಸಿದ್ದ.

ಈ ವೇಳೆ ಪೊಲೀಸರು ಅವನ ಅಪ್ಪ , ಅಮ್ಮನ ಸಂಪರ್ಕದಲ್ಲಿದ್ದು ಮಗನನ್ನು ಉಗ್ರ ಸಂಘಟನೆಗೆ ತೆರಳದಂತೆ ತಡೆಯಬೇಕೆಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಂದೆತಾಯಿ ಅವನ ಮನವೊಲಿಸಿದರು. ಇದಾದ ನಂತರ ಡ್ಯಾನಿಶ್ ಇದೀಗ ಉಗ್ರಗಾಮಿ ಚಟುವಟಿಕೆಗಳಿಂದ ವಿಮುಖನಾಗಿ ಪೊಲೀಸರ ಎದುರು ಶರಣಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin