ಕತಾರ್‍ನಲ್ಲಿ ಮರಣದಂಡನೆಗೆ ಗುರಿಯಾಗಿದ ಭಾರತೀಯರಿಬ್ಬರ ಪರವಾಗಿ ಕೇಂದ್ರ ಸರ್ಕಾರದಿಂದ ಕ್ಷಮಾದಾನ ಅರ್ಜಿ

Spread the love

Sushma-Swaraj

ನವದೆಹಲಿ, ಜ.10-ಮಹಿಳೆಯೊಬ್ಬಳನ್ನು ನಾಲ್ಕು ವರ್ಷಗಳ ಹಿಂದೆ ಕೊಲೆಗೈದ ಆರೋಪದಲ್ಲಿ ಕತಾರ್ ಸುಪ್ರೀಂಕೋರ್ಟ್‍ನಿಂದ ಮರಣದಂಡನೆಗೆ ಗುರಿಯಾಗಿರುವ ತಮಿಳುನಾಡಿನ ಇಬ್ಬರು ವ್ಯಕ್ತಿಗಳ ಕುಟುಂಬದ ಪರವಾಗಿ ಕ್ಷಮದಾನ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.   ಅಪರಾಧಿಗಳಾದ ಅಳಗಪ್ಪ ಸುಬ್ರಮಣಿಯನ್ ಮತ್ತು ಚೆಲ್ಲದೊರೈ ಪೆರುಮಾಳ್ ಪರವಾಗಿ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಲು ನೆರವಾಗುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ವರದಿಯನ್ನು ಸಲ್ಲಿಸುವಂತೆ ಅವರು ಎರಡು ದಿನಗಳ ಹಿಂದೆ ಕತಾರ್‍ನ ಭಾರತೀಯ ರಾಯಭಾರಿ ಕಚೇರಿಯನ್ನು ಕೋರಿದ್ದರು.

ಈ ಇಬ್ಬರು ಅಪರಾಧಿಗಳ ಮರಣದಂಡನೆಯನ್ನು ರದ್ದುಗೊಳಿಸಬೇಕೆಂದು ಭಾರತೀಯ ರಾಯಭಾರಿ ಕಚೇರಿ ಕೋರಿಕೆಯನ್ನು ಕತಾರ್ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ ಪ್ರಕರಣದ ಮೂರನೇ ಆರೋಪಿ ಶಿವಕುಮಾರ್ ಅರಸನ್‍ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 15 ವರ್ಷಗಳ ಸರಳ ಶಿಕ್ಷೆಗೆ ಇಳಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin