ಕಪಿಲಾ ನದಿ ದಡದಲ್ಲಿ ಚಿರತೆ ಶವ
ಎಚ್ಡಿ ಕೋಟೆ, ಆ.10- ತಾಲೂಕಿನ ಚಿತ್ತೂರು ಗ್ರಾಮದ ಬಳಿ ಕಪಿಲಾ ನದಿಯಲ್ಲಿ ಚಿರತೆಯ ಶವ ಪತ್ತೆಯಾಗಿದೆ.ಚಿರತೆಯನ್ನು ಯಾರೋ ಕೊಂದು ನದಿಗೆ ಬಿಸಾಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ವನ್ಯಪ್ರಾಣಿಯ ಕುತ್ತಿಗೆಯಲ್ಲಿ ಗಾಯದ ಗುರುತಿದೆ ಮತ್ತು ಕಾಲುಗಳನ್ನು ಕೂಡ ಕಟ್ಟಲಾಗಿದೆ.ಇಂದು ಬೆಳಗ್ಗೆ ನದಿ ಬಳಿಗೆ ಹೋಗಿದ್ದ ಗ್ರಾಮಸ್ಥರೊಬ್ಬರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಚಿರತೆ ನುಗ್ಗಿದ ಸಂದರ್ಭದಲ್ಲಿ ಯಾರೋ ಹಿಡಿದು ಸಾಯಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
► Follow us on – Facebook / Twitter / Google+
Facebook Comments