ಕಬಡ್ಡಿ ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಟ್ವಿಟ್ಟರ್ ನಲ್ಲಿ ಅಭಿನಂದನೆಗಳ ಸುರಿಮಳೆ

Spread the love

Kabbaddi

ನವದೆಹಲಿ, ಅ. 23- ಕಬಡ್ಡಿ  ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ವೀರಾವೇಶದಿಂದ ಹೋರಾಡಿ ಚಾಂಪಿಯನ್ಸ್ ಆದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಛಲ, ಹುಮ್ಮಸ್ಸು ಹಾಗೂ ಸಾಮಥ್ರ್ಯವಿದ್ದರೆ ಎಂತಹ ಕಠಿಣ ಸವಾಲನ್ನು ಎದುರಿಸಿ ಜಯಿಸಬಹುದೆಂಬುದನ್ನು ಭಾರತ ಕಬ್ಬಡಿ ತಂಡವು ಸಾಬೀತು ಪಡಿಸಿದೆ ಎಂದು ಬಣ್ಣಿಸಿದರು.

ಗಬ್ಬರ್ ಮಾದರಿಯಲ್ಲಿ ವೀರು ಅಭಿನಂದನೆ:

ಶೋಲೆ ಚಿತ್ರದ ಗಬ್ಬರ್‍ಸಿಂಗ್‍ನ ಶ್ರೇಷ್ಠ ಡೈಲಾಗ್ ಮಾದರಿಯಲ್ಲೇ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಅಜಯ್‍ಠಾಕೂರ್ (12 ರೇಡ್ ಪಾಯಿಂಟ್)ರನ್ನು ಕುರಿತು ನಿಮ್ಮ ತಾಕತ್ತು, ಹುಮ್ಮಸ್ಸನ್ನು ನನಗೆ ಕೊಡು ಠಾಕೂರ್ ಎಂದು ಹೊಗಳಿದ್ದರೆ, ಅಲ್ಲದೆ ಸೋಲಿನ ಹೊಸ್ತಿನಲ್ಲಿದ್ದ ಭಾರತವನ್ನು ಗೆಲುವಿನ ದಡದತ್ತ ಕೊಂಡಿರುವ ಅಜಯ್ ಠಾಕೂರ್ ಕಪ್ ಗೆಲ್ಲಲು ನಿಜವಾದ ರೂವಾರಿಯೆಂದು ಬಣ್ಣಿಸಿದ್ದಾರೆ.

ಕ್ರಿಕೆಟ್‍ನಷ್ಟೇ ಇತ್ತೀಚಿನ ದಿನಗಳಲ್ಲಿ ಕಬ್ಬಡಿಗೂ ಪ್ರಾಧಾನ್ಯತೆ ಬಂದಿದ್ದು ಹಾಗೂ ವಿಶ್ವಕಬ್ಬಡಿಯ ಮುಕುಟವನ್ನು ಭಾರತ ತಂಡವು 8ನೆ ಬಾರಿ ಜಯಿಸಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಯುವಕರು ಕಬ್ಬಡಿ ಅತ್ತಲೂ ಹೆಚ್ಚು ವಾಲುವ ಮನಸ್ಸು ಮಾಡಲಿದ್ದಾರೆ ಎಂದರು. ಇವರೇ ಅಲ್ಲದೆ ಕ್ರಿಕೆಟಿಗರಾದ ಯೂಸಫ್ ಪಠಾಣ್, ಇರ್ಫಾನ್ ಪಠಾಣ್, ಧವಳ್ ಕುಲಕರ್ಣಿ, ಗುಟ್ಟಾ ಜ್ವಾಲಾ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಅನುಪ್‍ಕುಮಾರ್ ನಾಯಕತ್ವದ ಭಾರತ ತಂಡಕ್ಕೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಕಬಡ್ಡಿ ಗೆಲುವು ಉರಿ ಹುತಾತ್ಮರಿಗೆ ಸಮರ್ಪಣೆ

ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ಜಯ ಗಳಿಸುವ ಮೂಲಕ ಸತತ ಮೂರನೇ ಬಾರಿಗೆ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ತಮ್ಮ ಈ ಗೆಲುವನ್ನು ಉರಿ ಸೇನಾ ನೆಲೆ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಸೈನಿಕರಿಗೆ ಅರ್ಪಿಸಿದ್ದಾರೆ. ವಿಜಯೋತ್ಸವದ ಬಳಿಕ ಭಾರತ ಕಬಡ್ಡಿ ಕೋಚ್ ಬಲ್ವಾನ್ ಸಿಂಗ್ ವಿಶ್ವಕಪ್ ಗೆಲುವನ್ನು ನಾವು ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಿಸುತ್ತಿದ್ದೇವೆ. ಪಂದ್ಯಕ್ಕೂ ಮುನ್ನವೇ ಪ್ರಶಸ್ತಿಯನ್ನು ಇಡೀ ದೇಶಕ್ಕೆ ಅದರಲ್ಲೂ ಪ್ರಮುಖವಾಗಿ ಯೋಧರಿಗೆ ಸಲ್ಲಿಸುವ ನಿರ್ಧಾರ ಮಾಡಿದ್ದೇವು ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

 

Sri Raghav

Admin