ಕಬ್ಬಿಣ ಕತ್ತರಿಸುವಾಗ ದುರ್ಘಟನೆ : ಕಾರ್ಮಿಕ ಸಾವು

Spread the love

ಚನ್ನಪಟ್ಟಣ, ಸೆ.2- ಕಬ್ಬಿಣ ಕತ್ತರಿಸುವಾಗ ಡ್ರಿಲ್ಲಿಂಗ್ ಚಕ್ರ ಕಳಚಿ ಎದೆಗೆ ಹೊಡೆದ ಪರಿಣಾಮ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊ ಲೀಸ್ ಠಾಣೆ ವ್ಯಾಪ್ತಿಯ ಅಬ್ಬೂರು ದೊಡ್ಡಿಯಲ್ಲಿ ನಡೆದಿದೆ.ಕೂಲಿಕಾರ್ಮಿಕ ರಾಜೇಶ್ (26) ಮೃತಪಟ್ಟ ಕಾರ್ಮಿಕನಾಗಿದ್ದು , ಉತ್ತರ ಪ್ರದೇಶದ ಮೂಲದವರಾದ ಈತ ತನ್ನ ಸಹೋದರ ಜೊತೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಬಾರ್‍ಬೈಡಿಂಗ್ ಕೆಲಸ ಮಾಡುತ್ತಿದ್ದನು.

ಪುನಿತ್ ಎಂಬುವರು ಅಬ್ಬೂರು ದೊಡ್ಡಿಯಲ್ಲಿ ಶೌಚಾಲಯಗಳ ನಿರ್ಮಾಣದ ಟೆಂಡರ್ ಪಡೆದಿದ್ದು ಸಿಮೆಂಟ್ ಬಳೆ ನಿರ್ಮಾಣಕ್ಕೆ ಅಗತ್ಯವಾಗಿರುವ ಕಬ್ಬಿಣವನ್ನು ಕತ್ತರಿಸುವಾಗ ಈ ದುರ್ಘಟನೆ ಸಂಭವಿಸಿದೆ.ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin