ಕರಡಿ ದಾಳಿ : ದನಗಾಯಿಗೆ ತೀವ್ರ ಗಾಯ

belagam2

ಮುಂಡಗೋಡ,ಸೆ.22- ಕರಡಿ ದಾಳಿಗೆ ದನಗಾಯಿಯೋರ್ವ ತೀವ್ರ ಗಾಯ ಗೊಂಡ ಘಟನೆ ತಾಲೂಕಿನ ಯರೆಬೈಲ್ ಗುಂಜವತಿ ಅರಣ್ಯದಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ದೂಳುಮಕ್ಕು ದೂಯಿಪಡೆ(45) ಗಾಯಾಳು. ಪ್ರತಿದಿನದಂತೆ ದನ ಮೇಯಿಸಿಕೊಂಡು ಸಂಜೆ ಮನೆಗೆ ಮರಳುತ್ತಿದ್ದಾಗ ಏಕಾಏಕಿ ಕರಡಿ ದಾಳಿ ನಡೆಸಿ ತಲೆ ಹಾಗೂ ತೊಡೆ ಭಾಗದಲ್ಲಿ ಪರಚಿ ಗಾಯಗೊಳಿಸಿದೆ. ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಈತನಿಗೆ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‍ಗೆ ದಾಖಲಿಸಲಾಗಿದೆ.

 

Follow us on –  Facebook / Twitter  / Google+

Sri Raghav

Admin