‘ಕರಾಳ ದಿನಾಚರಣೆ’ ಆಚರಿಸಿದ ಎಂಇಎಸ್ ಪುಂಡರನ್ನು ಮಟ್ಟ ಹಾಕಿ : ಕಾಗೋಡು ಗುಡುಗು

kagodutimmappa
ಬೆಂಗಳೂರು, ನ.2- ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನವಾದ ನಿನ್ನೆ ಎಂಇಎಸ್ ಕರಾಳ ದಿನಾಚರಣೆ ಆಚರಿಸಿದ್ದನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತೀವ್ರವಾಗಿ ಖಂಡಿಸಿದ್ದು, ಅವರನ್ನು ಮಟ್ಟ ಹಾಕಬೇಕೆಂದು ಗುಡುಗಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಬೇಕೆಂದೇ ರಾಜ್ಯೋತ್ಸವ ದಿನದಂದು ಎಂಇಎಸ್‍ನವರು ಕರಾಳ ದಿನ ಆಚರಿಸುತ್ತಾರೆ. ಇದು ನಿಜಕ್ಕೂ ಖಂಡನೀಯ ಹಾಗೂ ದುರದೃಷ್ಟಕರ. ಇಂತಹುದಕ್ಕೆ ಅವಕಾಶ ಕೊಡಬಾರದು ಎಂದು ಖಾರವಾಗಿ ಹೇಳಿದರು.

ಬೆಳಗಾವಿ ಗಡಿ ಸಮಸ್ಯೆ ಬಗ್ಗೆ ಎಂಇಎಸ್‍ನವರು ಕೇಂದ್ರ ಸರ್ಕಾರದ ಬಳಿಗೆ ಹೋಗಿ ಪರಿಹಾರ ಕಂಡುಕೊಳ್ಳಬೇಕೆ ಹೊರತು ಕರಾಳ ದಿನ ಆಚರಿಸಿ ಶಾಂತಿ ಕದಡುವಂತಹ ಕೆಲಸ ಮಾಡಬಾರದು ಎಂದು ತಿಳಿಸಿದರು.ಕೇಂದ್ರ ತಂಡ ಬಂದಿದೆ: ರಾಜ್ಯದಲ್ಲಿ ಕಾಡುತ್ತಿರುವ ಬರ ಪರಿಸ್ಥಿತಿ ಅರಿಯಲು ಕೇಂದ್ರದ ಅಧ್ಯಯನ ತಂಡ ಬಂದಿದೆ. ಮಧ್ಯಾಹ್ನ ವಿಧಾನಸೌಧದಲ್ಲಿ ತಂಡ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಯಾವ ಯಾವ ತಂಡ ಎಲ್ಲೆಲ್ಲಿಗೆ ಪ್ರವಾಸ ಹೋಗಬೇಕು ಎಂಬ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

► Follow us on –  Facebook / Twitter  / Google+

Sri Raghav

Admin