ಕರ್ತವ್ಯಕ್ಕೆ ಅಡ್ಡಿ : ತಹಸೀಲ್ದಾರ್ ದೂರು
ಮೈಸೂರು,ಡಿ.23- ತಹಸೀಲ್ದಾರ್ರವರ ಕರ್ತವಕ್ಕೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಆರ್ಟಿಐ ಕಾರ್ಯಕರ್ತನೊಬ್ಬನನ್ನು ನಜರ್ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗೇಂದ್ರ ಬಂಧಿತ ಆರ್ಟಿಐ ಕಾರ್ಯಕರ್ತ. ತಹಸೀಲ್ದಾರ್ ರಮೇಶ್ಬಾಬು ಅವರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ, ನಾಗೇಂದ್ರ ಪ್ರತಿದಿನ ಕಚೇರಿಗೆ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ನಜರಾಬಾದ್ ಠಾಣೆ ಇನ್ಸ್ಪೆಕ್ಟರ್ ಶೇಖರ್ ನಾಗೇಂದ್ರನನ್ನು ಬಂಧಿಸಿದ್ದಾರೆ. ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.