ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಮಾಡಿದ ಇಬ್ಬರ ಬಂಧನ
ಬೆಳಗಾವಿ, ಫೆ.22-ಕರ್ತವ್ಯ ನಿರತ ಸಿಪಿಐ ಮೇಲೆ ದುಷ್ಕರ್ಮಿಗಳು ಹಲ್ಲೆ ಯತ್ನ ನಡೆಸಿರುವ ಘಟನೆ ತಡರಾತ್ರಿ ಸದಾಶಿವನಗರದಲ್ಲಿ ನಡೆದಿದೆ. ಎಪಿಎಂಸಿ ಠಾಣೆ ಸಿಪಿಐ ಜೆ.ಎಂ.ಕಾಲಿಮಿರ್ಚಿ ಅವರು ರಾತ್ರಿ ರೌಂಡ್ಸ್ ಬಂದ ಸಂದರ್ಭದಲ್ಲಿ ಕೆಲವರು ಗಲಾಟೆ ಮಾಡುತ್ತಿದ್ದರು. ಗಲಾಟೆ ನಿಯಂತ್ರಣಕ್ಕೆ ಮುಂದಾದಾಗ ಪೊಲೀಸರೊಂದಿಗೆ ಕೆಲವರು ವಾದಕ್ಕೆ ಇಳಿದಾಗ ಬಿಡಿಸಲು ಮುಂದಾದ ಇನ್ಸ್ಪೆಕ್ಟರ್ ಶರ್ಟ್ ಹಿಡಿದು ಕೆಲ ಕಿಡಿಗೇಡಿಗಳು ಎಳೆದಾಡಿದ್ದಾರೆ. ಸದಾಶಿವನಗರ ಮುಖ್ಯರಸ್ತೆಯ ಬೇಕರಿ ಬಳಿ ನಡೆದಿರುವ ಈ ಘಟನೆ ಸಂಬಂಧ ಕಿಶನ್ ಮತ್ತು ಅಜರುದ್ದೀನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >