ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇನ್ಸ್‍ಪೆಕ್ಟರ್ ಅಮಾನತು

dayanand

ಮೈಸೂರು, ಸೆ.21-ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ನಗರದ ಮಂಡಿಠಾಣೆ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನು ನಗರ ಪೊಲೀಸ್ ಆಯುಕ್ತ ದಯಾನಂದ್ ಅಮಾನತುಪಡಿಸಿದ್ದಾರೆ.ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಅಕ್ಷಯ್ ಬಾರ್ ಬಳಿ ಆ.28ರಂದು ರಾತ್ರಿ ರೌಡಿಶೀಟರ್ ವಿಜಯ್‍ಕುಮಾರ್ ಎಂಬಾತನ ಹತ್ಯೆಯಾಗಿತ್ತು. ರಾತ್ರಿ ಬಹಳ ಹೊತ್ತಿನವರೆಗೆ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾರ್ ಮುಚ್ಚಿಸದೆ ಇದ್ದುದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಅಲ್ಲದೆ, ಯುವತಿಯೊಬ್ಬರು ನೀಡಿದ ದೂರಿಗೆ ಎಫ್‍ಐಆರ್ ದಾಖಲಿಸದೆ ಎನ್‍ಸಿಆರ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ್ದಾರೆಂದು ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್‍ರನ್ನು ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ.

 

► Follow us on –  Facebook / Twitter  / Google+

Sri Raghav

Admin