ಕಲಚೇತನರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರಂಭಿಸಿದ ಧರಣಿ ಅಂತ್ಯ

2

ಧರಣಿ ನಿರತರು ಬೆಳಗ್ಗೆಯಿಂದಲೂ ಕೂತಿದ್ದರೂ ಯಾವೊಬ್ಬ ಅಧಿಕಾರಿ ಸ್ಥಳಕ್ಕೆ ಆಗಮಿಸದೇ ಇದ್ದಾಗ ರಸ್ತೆಗೆ ಇಳಿದ ಅಂಗವಿಕಲರು ಟೈರ್‍ಗೆ ಬೆಂಕಿ ಹಚ್ಚಿ ರಸ್ತೆ ಬಂದ್ ಮಾಡಲು ಮುಂದಾದರು. ಇದನ್ನು ತಡೆದ ಪೊಲೀಸರು ಈ ರೀತಿ ಕಾನೂನು ಉಲ್ಲಂಘಿಸಿದರೆ ನಿಮ್ಮ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸ್ ಮಧ್ಯೆ ವಾಗ್ವಾದ ನಡೆಯಿತು. ಧರಣಿಯ ವೇಳೆ ಹೋರಾಟಗಾರರನ್ನು ಹುರಿದುಂಬಿಸುತ್ತಿದ್ದ ಮುನ್ನಿ ಮುಲ್ಲಾ ಕೆಲ ಸಮಯ ಪ್ರಜ್ಞಾಹೀನರಾದ ಘಟನೆಯೂ ನಡೆಯಿತು.

ಮುದ್ದೇಬಿಹಾಳ,ಫೆ.24- ತಾಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪ್ರದೇಶದ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕಿನ ಎಲ್ಲಾ ವಿಕಲಚೇತನರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರಂಭಿಸಿದ ಧರಣಿಗೆ ಸ್ಪಂದಿಸಿರುವ ತಾಲೂಕು ಅಡಳಿತದ ಅಧಿಕಾರಿಗಳ ಭರವಸೆಯ ಮೇರೆಗೆ ಧರಣಿ ಸತ್ಯಾಗ್ರಹವನ್ನು ಸಂಜೆ ಹಿಂದಕ್ಕೆ ಪಡೆದು ಕೊಂಡಿದ್ದಾರೆ.ಇದೇ ಸಂದರ್ಭದಲ್ಲಿ ಪಟ್ಟಣದ ತಾಪಂ ಸಭಾಭವನದಲ್ಲಿ ನಿನ್ನೆ ತಾಲೂಕಿನ ಎಂಆರ್‍ಡಬ್ಲ್ಯೂ ಹಾಗೂ ವಿಆರ್‍ಡಬ್ಲ್ಯೂ ತಾಲೂಕು ಅಧ್ಯಕ್ಷ ಪವಾಡೆಪ್ಪ ಮುರಾಳ, ಜಿಲ್ಲಾಧ್ಯಕ್ಷ ಎಸ್.ಕೆ. ಘಾಟಿ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಪಂ ಪಿಡಿಓಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೆ ವಿಕಲಚೇತನರಿಗಾಗಿಯೇ ಇರುವ ಶೇ. 3ರಷ್ಟು ಅನುದಾನದ ಅಡಿಯಲ್ಲಿನ ಸೌಲಭ್ಯಗಳನ್ನು ಕೆಲವೊಂದು ಗ್ರಾಮ ಪಂಚಾಯಿಯಲ್ಲಿ ಈಗಲೂ ಕೊಟ್ಟಿರುವುದಿಲ್ಲ. ತಾಪಂನ ಅನುದಾನದಲ್ಲಿ ಇಂಧನ ಚಾಲಿತ ತ್ರಿಚಕ್ರ ವಾಹನಗಳನ್ನು ಕೊಡಲು ಒತ್ತಾಯಿಸಿದ್ದರೂ ಕೊಟ್ಟಿಲ್ಲ. ಅನಗತ್ಯವಾಗಿರುವ ಸೋಲಾರ್ ದೀಪಗಳನ್ನು ಕೊಡುತ್ತೇವೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎತ್ತಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ತಾಪಂ ವಿಕಲಚೇತನರಿಗೆ 227 ಮನೆಗಳು ಮಂಜೂರಾಗಿದ್ದು, ಅದರಲ್ಲಿ 83ಮನೆಗಳು ಪಿಡಿಓ ಅವರುಗಳ ನಿರ್ಲಕ್ಷ್ಯದಿಂದಾಗಿ ರದ್ದಾಗಿದ್ದು ಮರಳಿ ಮಂಜೂರಾತಿ ಆದೇಶ ನೀಡಬೇಕು. ಕಂದಾಯ ಇಲಾಖೆಯಲ್ಲಿ ವಿಕಲಚೇತನರಿಗೆ ಮಾಶಾಸನ ಅರ್ಜಿ ಸಲ್ಲಿಸಲು ಬಾಂಡ್ ಹಚ್ಚುವುದನ್ನು ರದ್ದು ಪಡಿಸಬೇಕು. ತಾಲೂಕಿನಲ್ಲಿ ಇನ್ನು ಬಹಳ ಕಡೆ ಸರಕಾರಿ ಕಛೇರಿಗಳಲ್ಲಿ ಅಂಗವಿಕಲರ ರ್ಯಾಂಪ್ ಮತ್ತು ಸೈಡ್ ಬಾರ್ ಇರುವುದಿಲ್ಲ ಅದನ್ನು ಕಡ್ಡಾಯವಾಗಿ ಮಾಡಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಧರಣಿ ವಿಷಯ ಅರಿತ ತಹಸೀಲ್ದಾರ್ ಎಂ.ಎಸ್. ಬಾಗವಾನ ಮಾತನಾಡಿ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬೇಡಿಕೆಗಳನ್ನು ತಕ್ಷಣ ಈಡೇರಿಸುವುದಾಗಿ ಹೇಳಿದರಲ್ಲದೆ ಬಾಂಡ್ ಪಡೆದುಕೊಳ್ಳದೆ ಅಂಗವಿಕಲರ ಮಾಶಾಸನಕ್ಕೆ ಅರ್ಜಿ ಪಡೆದುಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸುತ್ತೇನೆ.

ಅಲ್ಲದೆ ಆಯ್ದ ಕಡೆಗಳಲ್ಲಿ ಅಂಗವಿಕಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರ್ಯಾಂಪ್‍ಗಳನ್ನು ನಿರ್ಮಿಸಲು ಸೂಚಿಸಿ ಎರಡು ದಿನದಲ್ಲಿ ಕ್ರಮ ಜರುಗಿಸುವುದಾಗಿ ಹೇಳಿದರು.
ತಾಪಂ ಪ್ರಭಾರಿ ಇಓ ಬಿ.ಎಸ್. ಪ್ಯಾಟಿಗೌಡರ ಮಾತನಾಡಿ, ಒಂದು ವಾರದ ಕಾಲಾವಕಾಶ ನೀಡುವಂತೆ ಮನವಿ ಮಾಡಿ, ಇದಕ್ಕೆ ಸ್ಪಂದಿಸಿದ ಧರಣಿ ನಿರತರು ತಮ್ಮ ಹೋರಾಟ ಹಿಂದಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಮುಖಂಡ ಭೀಮನಗೌಡ ತಂಗಡಗಿ, ಮುನ್ನಿ ಮುಲ್ಲಾ, ಪಿ.ಸಿ. ಚಿಂಚೋಳಿ ಬಂಟನೂರ, ವಿ.ಎಂ. ಮೂಲಿಮನಿ, ಮಿಣಜಗಿ, ಬಸರಕೋಡ, ಬಿದರಕುಂದಿ, ಮುಂತಾದ ಗ್ರಾಮಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin