ಕಲಬುರಗಿ ಜಿಲ್ಲೆಯಲ್ಲಿ ಮುಂದುವರೆದ ವರುಣನ ಅವಾಂತರ : ಹಲವು ಸೇತುವೆ ಮುಳುಗಡೆ

Spread the love

belagam-2

ಕಲಬುರಗಿ,ಸೆ.16- ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳಕೊಳ್ಳ ತುಂಬಿ ಹರಿಯುತ್ತಿವೆ. ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಲವು ಸೇತುವೆಗಳು ಮುಳಗಡೆಯಾಗಿ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಸೇಡಂ ತಾಲೂಕಿನ ಮಲಖೇಡ ಕಾಗಿಣಾ ನದಿಗೆ ಅಡ್ಡಲಾಗಿರುವ ಸೇತುವೆ ಮೇಲೆ ಎರಡು ಅಡಿ ಹರಿದ ನೀರು ಈಗ ಇಳಿಕೆಯಾಗಿದೆ.  ಸೇಡಂ- ಕಲಬುರಗಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಇನ್ನು ಚಿತ್ತಾಪೂರ ತಾಲೂಕಿನ ದಂಡೋಲೆ ಬ್ರಿಡ್ಜ್ ಮತ್ತು ಮುಲ್ಲಾಮುರಿ ನದಿಗೆ ತಾಜಲಾಪೂರ ಬಳಿ ನಿರ್ಮಿಸಲಾಗಿರುವ ಸೇತುವೆ ಮೇಲಿನ ನೀರು ಇಳಿಮುಖವಾಗಿದೆ. ತಾಜಲಾಪೂರ, ಚಿಮ್ಮನಚೋಡ, ಅಸಲಗರ, ಬಸಂತಿ ಗ್ರಾಮಗಳಿಗೆ ರಸ್ತೆ ಸಂಚಾರ ಕೂಡಾ ಮುಕ್ತವಾಗಿದೆ.

ನಿನ್ನೆಯಿಂದ ಇವತ್ತಿನವರೆಗೂ ಜಿಲ್ಲೆಯಾದ್ಯಂತ 4.06 ಮಿ.ಮೀ, ಮದನ ಹಿಪ್ಪರಗಾ- 87.10 ಮಿ.ಮೀ, ಅಫ್ಜಲಪೂರ-42.02 ಮಿಲಿ ಮೀಟರ್, ಆಳಂದ 4 ಮಿ.ಮೀ, ಸೇಡಂ-8.8 ಮಿ.ಮೀ, ಚಿತ್ತಾಪೂರ-9 ಮಿ.ಮೀ, ಗಡಿಭಾಗ ಕೊಂಚಾವರಂ 45.20 ಮಿ.ಮೀ, ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮೂರು ದಿನಗಳವರೆಗೆ ಹೀಗೆ ಸತತವಾಗಿ ಮಳೆ ಸುರಿಯುವ ನಿರೀಕ್ಷೆ ಇದೆ. ಮಳ್ಳಿ ನಿವಾಸಿ ನಾಗಪ್ಪಾ ಭೀಮಷಾ (55) ಮನೆ ಬಿದ್ದು ಮೃತ ಪಟ್ಟಿದ್ದಾರೆ. ಮೃತ ವ್ಯಕ್ತಿಯ ಸಂಬಂಧಿಕರಿಗೆ ಇಂದು 4 ಲಕ್ಷ ರೂ ಪರಿಹಾರವನ್ನು ಹಸ್ತಾಂತರಿಸಲಾಗುತ್ತದೆ ಎಂದು ಜಿಲ್ಲಾ ಆಡಳಿತ ಮೂಲಗಳು ತಿಳಿಸಿವೆ.
ಇನ್ನು ಬೀದರ ಜಿಲ್ಲೆಯಲ್ಲಿ ವರುಣ ಆರ್ಭಟದಿಂದ ಜನ ಕಂಗಾ ಲಾಗಿದ್ದಾರೆ. ಭಾಲ್ಕಿ ತಾಲೂಕಿನ ಕಳಸದಾಳ ಗ್ರಾಮದ ಡ್ಯಾಮ್ ಒಡೆದಿದ್ದರಿಂದ ಐದನೂರಕ್ಕೂ ಹೆಚ್ಚು ಪ್ರದೇಶ ಜಮೀನಿಗೆನೀರು ನುಗಿದ್ದ ಪರಿಣಾಮ ಬೆಳೆದು ನಿಂತ ಬೆಳೆ ಸೋಯಾ, ತೊಗರಿ ಉದ್ದಿನ ಬವಣೆಗಳು ನೀರು ಪಾಲಾಗಿವೆ.ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹರಸಾಹಸ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಬಿಟ್ಟ ಪರಿಣಾಮ ಬಾಂತ್ರಾಟ, ಧನೂರ, ಆನಂದವಾಡಿ, ನಿಡೆಬಾನ, ಆಳಂದಿ, ಸಾಯಿಗಾಂವ ಗ್ರಾಮದಲ್ಲಿ ನೀರು ಹರಿಯುತ್ತಿದೆ. ಹಾನಿಯಾಗಿದ್ದ ಬೆಳೆಗೆ ಶ್ರೀಘ್ರದಲ್ಲಿ ಪರಿಹಾರ ನೀಡಲಾಗುವುದು ಎಂದು ಭಾಲ್ಕಿಯ ತಹಶಿಲ್ದಾರ ಮನೋಹರ ಸ್ವಾಮಿ ಈ ಸಂಜೆ ಪತ್ರಿಕೆ ತಿಳಿಸಿದ್ದಾರೆ.
ಇನ್ನು ಮಾಂಜ್ರ ನದಿಗೆ ಹೊಂದಿಕೊಂಡಿರುವ ಹಳ್ಳಗಳು ಹುಕ್ಕಿ ಹರಿಯುತ್ತಿದ್ದರಿಂದ ಸೇತುವೆ ನಿಡೋದಾ ಗ್ರಾಮದ ಸಂಚಾರ ಅಸ್ತವ್ಯಸ್ಥ ಗೊಂಡಿತ್ತು. ಈಗಾಗಲೇ ನೀರು ಇಳಿಕೆಯಾಗಿದೆ ಎಂದು ಔರಾದ ತಾಲೂಕಿನ ತಹಶಿಲ್ದಾರ ಶಾಂತಲಾ ಚಂದನ ಪತ್ರಿಕೆಗೆ ತಿಳಿಸಿದರು. ನಿಡೋದಾ ಸೇತುವೆ ಈಗ ಸಂಚಾರಕ್ಕೆ ಮುಕ್ತವಾಗಿದೆ. ಮುಳಗಡೆಯಾಗಿದ್ದರಿಂದ ಗ್ರಾಮಸ್ಥರು ಗ್ರಾಮಕ್ಕೆ ಬಾರದೇ ಪರದಾಡುವ ಸ್ಥಿತಿ ಉಂಟಾಗಿತ್ತು. ಭಾರಿ ಮಳೆಗೆ ಸೇತುವೆ ಅಷ್ಟೇ ಅಲ್ಲಾ ರೈಲು ಹಳಿ ಸಹ ಕೊಚ್ಚಿ ಹೋಗಿದೆ. ಹೈದ್ರಾಬಾದನ ವಿಕ್ರಾಬಾದ ರೇಲ್ವೆ ನಿಲ್ದಾಣದಿಂದ 8 ಕಿ.ಮೀ. ದೂರದಲ್ಲಿ ಹಳಿ ಸಂಪೂರ್ಣವಾಗಿ ಹಾಳಾಗಿದ್ದರಿಂದ ಈ ದುರಂತ ಸಂಭವಿಸಿದೆ.
ಹೈದ್ರಾಬಾದ ಬೀದರ ಮಾರ್ಗವಾಗಿ ರೈಲು ಹೋಗುತ್ತಿದೆ. ಮುಂಬೈ, ಪುಣೆ, ನಾಂದೇಡ, ಬೆಂಗಳೂರು ರೈಲಗಳ ಸಂಚಾರ ಬಂದಾಗಿತ್ತು. ಇದರಿಂದ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಪರದಾಡುವ ಸ್ಥಿತಿ ಕಾಣತೊಡಗಿತು. ಈಗಾಗಲೇ ಮತ್ತೊಂದು ಮಾರ್ಗವಾಗಿ ಹೈದ್ರಾಬಾದಿಂದ ರೈಲು ಸಂಚಾರ ತೊಡಗಿದೆ. ಇಂದು ಸಂಜೆ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ರೇಲ್ವೆ ವಿಭಾಗದ ಇಂಜಿನಿಯರ್ ಶ್ರೀನಿವಾಸ್ ತಿಳಸಿದ್ದಾರೆ. ಸೇಡೊಳಾ ಗ್ರಾಮದ ಸೇತುವೆ ಮಳೆಗಾಲ ಬಂದರೆ ಮುಳಗಡೆ ಯಾಗುತ್ತದೆ. ಇದರಿಂದ ಗ್ರಾಮಸ್ಥರು ಪ್ರತಿವರ್ಷ ಕಷ್ಟ ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಯಾರೊಬ್ಬ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲಾ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಜಮೀನಿಗೆ ನೀರು ನುಗ್ಗಿದ್ದರಿಂದ ಬೆಳೆ ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಒಟ್ಟಾರೆ ಬಿಸಿಲ ಬೇಗೆಯಿಂದ ತತ್ತರಿಸಿದ ಜಿಲ್ಲೆಯ ಜನರಿಗೆ ವರುಣದೇವ ಒಂದೆಡೆ ಕೃಪೆ ತೋರಿದರೆ, ಇನ್ನೊಂದಡೆ ಸಂಕಷ್ಟಕ್ಕೊಳಪಡಿಸಿದ್ದಾನೆ.

                                                                                                               – ವಿಕಿಲ ಎಸ್ ಹಿರೇಮಠ

 

► Follow us on –  Facebook / Twitter  / Google+

Facebook Comments

Sri Raghav

Admin