ಕಲಾಸಾಮ್ರಾಟ್ S.ನಾರಾಯಣ್ ನಿರ್ದೇಶನದ `ಪಂಟ’ ಚಿತ್ರಕ್ಕಾಗಿ ಹಾಡಿದ ಸುದೀಪ್

Spread the love

Sudeep-01

ವೀರಪರಂಪರೆ ಚಿತ್ರದ ನಂತರ ಕಿಚ್ಚ ಸುದೀಪ್ ಹಾಗೂ ಕಲಾಸಾಮ್ರಾಟ್ ಅವರು ಮತ್ತೆ ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ಓದಿ ಎಲ್ಲರೂ ಆ ಚಿತ್ರ ಯಾವುದೆಂದು ಅಂತರ್ಜಾಲ ಹುಡುಕಲು ಹೊರಟರು.ಆದರೆ, ಆ ರೀತಿ ಹೊರಟವರಿಗೆ ಗೋಚರಿಸಿದ್ದು ಸುದೀಪ್‍ನ ಸಿಂಗರ್ ಅವತಾರ. ಹೌದು ವೀರಪರಂಪರೆಯಲ್ಲಿ ಎಸ್.ನಾರಾಯಣ್‍ರ ನಿರ್ದೇಶನದಲ್ಲಿ ನಟಿಸಿದ್ದ ಸುದೀಪ್ ಅವರು ಈಗ ನಾರಾಯಣ್ ಅವರು ನಿರ್ದೇಶಿಸುತ್ತಿರುವ `ಪಂಟ’ ಚಿತ್ರಕ್ಕಾಗಿ ತಮ್ಮ ಸುಶ್ರಾವ್ಯ ಧ್ವನಿಯನ್ನು ಹರಿಸಿದ್ದಾರೆ. ಈ ಚಿತ್ರದಲ್ಲಿ ಬರುವ ಸುಮಧುರ ಪ್ರೇಮಮಯ ಗೀತೆಯಾದ ಇವಳೇ ಇವಳೇ ನನ್ನ ಹುಡುಗಿ ಮನಸಾ ಬಳಸಿ ನಿಂತ ಬೆಡಗಿ ಎಂಬ ಗೀತೆಗೆ ಸುದೀಪ್ ಧ್ವನಿಯಾಗಿದ್ದಾರೆ.ಈ ಗೀತೆಗೆ ಸುದೀಪ್ ಅವರ ಕಂಠವೇ ಬೇಕೆಂದು ನಿರ್ದೇಶಕ ಎಸ್.ನಾರಾಯಣ್ ಅವರು ಎರಡು ತಿಂಗಳ ಹಿಂದೆಯೇ ಕೇಳಿದಾಗ, ನಾನು ಬೇಸಿಕಲಿ ಒಬ್ಬ ಸಿಂಗರ್ ಅಲ್ಲ ನನ್ನ ಧ್ವನಿಯು ನಿಮ್ಮ ಚಿತ್ರಕ್ಕೆ ಹೊಂದುತ್ತದೆಯೋ ಇಲ್ಲವೋ ಎಂದು ಗೀತೆಯ ಟ್ರಾಕ್ ಅನ್ನು ಕಳಿಸಿ ನನ್ನ ವಾಯ್ಸ್ ರೇಂಜ್‍ಗೆ ಹೊಂದುವುದಾದರೆ ಹಾಡುತ್ತೇನೆ ಎಂದು ಸುದೀಪ್ ಹೇಳಿದರು.

ಆ ಪ್ರಕಾರ ಟ್ರಾಕ್ ಕಳಿಸಿದ್ದರು. ಮೊನ್ನೆ ಇದ್ದಕ್ಕಿದ್ದ ಹಾಗೆ ಸ್ಟುಡಿಯೋಕ್ಕೆ ಬಂದ ಸುದೀಪ್ , ಚಿತ್ರತಂಡದ ಯಾರೊಬ್ಬರಿಗೂ ಹೇಳದೆ ಇವಳೇ ಇವಳೇ ನನ್ನ ಹುಡುಗಿ ಎಂಬ ಗೀತೆಯನ್ನು ಹಾಡಿಬಿಟ್ಟು ಹೋದರು. ಸುದೀಪ್ ಸೊಗಸಾಗಿ ಹಾಡಿದ್ದಾರೆ. ಅವರ ಬಾಯಲ್ಲಿ ಕನ್ನಡ ತುಂಬಾ ಸ್ಫುಟವಾಗಿ ಬರುತ್ತದೆ. ಸುದೀಪ್ ಅವರ ಈ ಕೊಡುಗೆ ನಮಗೆ ಖುಷಿ ನೀಡಿದೆ. ಈ ಹಾಡನ್ನು ನಾಯಕ, ನಾಯಕಿಯ ಅಭಿನಯದಲ್ಲಿ ಬೆಂಗಳೂರಿನ ವಿವಿಧೆಡೆ ಚಿತ್ರಿಸಿದ್ದೇವೆ ಎಂದು ನಾರಾಯಣ್ ತಿಳಿಸಿದರು. ಸುಬ್ರಮಣಿಯನ್ ನಿರ್ಮಿಸಿ, ಎಸ್. ನಾರಾಯಣ್ ನಿರ್ದೇಶಿಸಿರುವ `ಪಂಟ’ ಎಂಬ ಚಿತ್ರಕ್ಕೆ ಡಿಟಿಎಸ್ ಕೆಲಸ ನಡೆಯುತ್ತಿದೆ. ಅನೂಪ್‍ರೇವಣ್ಣ ಈ ಚಿತ್ರದ ನಾಯಕ. ನಾರಾಯಣ್ ಅವರ ಈ ಚಿತ್ರದ ಗೀತರಚನೆ ಮಾಡಿ ಸಂಗೀತ ನೀಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin