ಕಲೆ ಉಳಿಸಿ ಬೆಳೆಸಿ : ಕಲಾವಿದೆ ಮಲ್ಲಮ್ಮ ಮೇಗೇರಿ ಸಲಹೆ

Spread the love

24

ಬೆಳಗಾವಿ,ಫೆ.28- ಪ್ರತಿಯೊ ಬ್ಬರೂ ಕಲಾವಿದರ ಕಲೆಗೆ ಪ್ರೋತ್ಸಾಹ ನೀಡುವ ಮೂಲಕ ಕಲೆಯನ್ನು ಉಳಿಸಿ, ಬೆಳೆಸಬೇಕು ಎಂದು ಬಯಲಾಟ ಕಲಾವಿದೆ ಮಲ್ಲಮ್ಮ ಮೇಗೇರಿ ಹೇಳಿದರು. ನಗರದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಪರಿಶಿಷ್ಟ ಪಂಗಡದವರಿಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಆಯೋಜಿಸಿದ್ದ ಸಂಗೀತ, ಡೊಳ್ಳು ಕುಣಿತ, ಭರತನಾಟ್ಯ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವ ಜನಾಂಗ ಜಾನಪದ ಕಲೆಯ ಮಹತ್ವ ತಿಳಿದುಕೊಂಡು ಸಮಾಜದಲ್ಲಿ ಜಾನಪದ ಕಲೆ ಬಹಳ ಮಹತ್ವ ಇದೆ. ಜಾನಪದ ಕಲೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ರಾಜ್ಯ ಸರಕಾರ ಕಲಾವಿದರಿಗಾಗಿ ನಾನಾ ಸೌಲಭ್ಯಗಳನ್ನು ನೀಡಿದ್ದು, ಪ್ರತಿಯೊಬ್ಬಕಲಾವಿದರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಂಗೀತ ಮತ್ತು ನೃತ್ಯ ಅಡಾಮಿ ಸದಸ್ಯ ರಾಜಪ್ರಭು ದೋತ್ರೆ, ಜಾನಪದ ಕಲಾವಿದ ಮಲಾರಪ್ಪ ರೋಣದ, ಭರತನಾಟ್ಯ ಕಲಾವಿದೆ ರೇಖಾ ಹೆಗಡೆ, ಸಂಗೀತ ಕಲಾವಿದ ಸುರೇಶ ಚಂದರಗಿ ಮುಂತಾದವರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin