ಕಲ್ಲುಕ್ವಾರಿಯಲ್ಲಿ ಸಿಡಿಲು ಬಡಿದು ಜಿಲೆಟಿನ್ ಕಡ್ಡಿಗಗಳ ಸ್ಫೋಟ : ತಂದೆ-ಮಗ ಸೇರಿ ಮೂವರ ಸಾವು

Spread the love

Hassan--01

ಹಾಸನ, ಮೇ 2- ಬಂಡೆ ಸಿಡಿಸುವ ವೇಳೆ ಜಿಲೆಟಿನ್ ಕಡ್ಡಿಗಳಿಗೆ ಸಿಡಿಲು ಬಡಿದು ತಂದೆ-ಮಗ ಸೇರಿದಂತೆ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಮೂಡಲಕೊಪ್ಪ ಗ್ರಾಮದ ಕಲ್ಲುಕ್ವಾರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.  ಮೂಡಲಕೊಪ್ಪ ಗ್ರಾಮದ ಜಗದೀಶ್ (46), ಪುತ್ರ ಪುನೀತ್ (22) ಹಾಗೂ ದಡದಹಳ್ಳಿಯ ನಾಗರಾಜ್ (40) ಮೃತ ದುರ್ದೈವಿಗಳೆಂದು ಗುರುತಿಸಲಾಗಿದ್ದು, ಮೂವರ ದೇಹಗಳು ಛಿದ್ರ ಛಿದ್ರಗೊಂಡಿದ್ದು, ಇದರಲ್ಲಿ ಇಬ್ಬರ ಶವಗಳು ಗುರುತಿಸಲು ಆಗದಂತಿವೆ.   ಬಂಡೆ ಸಿಡಿಸಲು ಸಿಡಿಮದ್ದು ಸ್ಫೋಟಿಸುವ ಸಂದರ್ಭದಲ್ಲಿ ಬಡಿದ ಸಿಡಿಲು ಈ ಮೂವರನ್ನು ಬಲಿ ತೆಗೆದುಕೊಂಡಿದೆ ಎಂದು ಶಂಕಿಸಲಾಗಿದೆ.ನಿನ್ನೆ ರಾತ್ರಿ ಈ ಮೂವರು ಮೂಡಲಕೊಪ್ಪಲು ಗ್ರಾಮದ ಬಳಿ ಇರುವ ಕಲ್ಲುಕ್ವಾರಿಯಲ್ಲಿ ಬಂಡೆ ಸಿಡಿಸಲು ಜಿಲೆಟಿನ್ ಕಡ್ಡಿಗಳನ್ನು ಜೋಡಿಸಲು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಗುಡುಗು ಸಹಿತ ಭಾರೀ ಮಳೆ ಬರುತ್ತಿತ್ತು.  ಜಿಲೆಟಿನ್ ಕಡ್ಡಿಗಳನ್ನು ಜೋಡಿಸುತ್ತಿರುವಾಗ ಏಕಾಏಕಿ ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಸಿಡಿಲು ಬಡಿದಿದ್ದರಿಂದ ಈ ಸ್ಫೋಟ ಸಂಭವಿಸರಬಹುದು ಎಂದು ಹೇಳಲಾಗಿದೆ. ಸ್ಫೋಟದ ತೀವ್ರತೆಗೆ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ.   ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಕಲ್ಲುಕ್ವಾರಿಯಲ್ಲಿ ಎಷ್ಟು ದಿನಗಳಿಂದ ಬಂಡೆ ಸಿಡಿಸಲಾಗುತ್ತಿತ್ತು, ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿದೆ, ಸ್ಫೋಟಕ್ಕೆ ಕಾರಣವೇನು ಎಂಬಿತ್ಯಾದಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತ ದೇಹಗಳನ್ನು ಶವ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin