ಕಳೆದ ವರ್ಷ ಭಾರತೀಯ ಸೇನೆಯ 125 ಯೋಧರ ಆತ್ಮಹತ್ಯೆ..!

Spread the love

Indian-01-Soldires

ನವದೆಹಲಿ, ಮಾ.11-ಪ್ರತಿ ವರ್ಷ ಭಾರತೀಯ ಸೇನಾ ಪಡೆಗಳ 100ಕ್ಕೂ ಹೆಚ್ಚು ಯೋಧರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ತಿಳಿಸಿದ್ಧಾರೆ.   ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆವ ವರ್ಷ (2016) 125 ಮಂದಿ ಸೈನಿಕರು ಸಾವಿಗೆ ಶರಣಾಗಿದ್ಧಾರೆ. ಯೋಧರಲ್ಲಿ ಒತ್ತಡ ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಪ್ರತಿ ವರ್ಷ ಸುಮಾರು 100 ಸಿಬ್ಬಂದಿಯನ್ನು ಸಶಸ್ತ್ರಪಡೆಗಳು ಕಳೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ.  2016ರಲ್ಲಿ 101 ಯೋಧರು, 19 ಏರ್‍ಮನ್‍ಗಳು ಹಾಗೂ ಐವರು ನಾವಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಜ.1ರಿಂದ ಈವರೆಗೆ 13 ಯೋಧರು ಸಾವಿಗೆ ಶರಣಾಗಿದ್ದಾರೆ ಎಂದು ಸಚಿವರು ಅಂಕಿ-ಅಂಶ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin