ಕಳೆಯಿತು ಬೇಸಿಗೆ ರಜೆ… ನಡೆಯಿರಿ ಶಾಲೆಗೆ….

School--0141

ಬೆಂಗಳೂರು, ಮೇ 29-ಇದುವರೆಗೆ ರಜೆಯ ಮಜವನ್ನು ಸವಿದ ಮಕ್ಕಳು ಪುನಃ ಶಾಲೆಗೆ ಹೋಗುವ ದಿನ ಬಂದಿದೆ. ಹೌದು ರಾಜ್ಯದ ಸರಕಾರಿ ಶಾಲೆಗಳಿಗೆ ನೀಡಿದ್ದ ಬೇಸಿಗೆ ರಜೆ ಮುಕ್ತಾಯವಾಗಿದ್ದು, 2017-18ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಇಂದಿನಿಂದ ಆರಂಭವಾದವು. ಅಂತೆಯೇ, ಈ ಬಾರಿ ಕೂಡ ಮೊದಲನೇ ದಿನ ಶಾಲೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಹಬ್ಬದ ವಾತಾವರಣದಲ್ಲಿ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ.ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಶಾಲೆಗಳ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ತಿಳಿಸಿದ್ದಾರೆ. ಬೆಳಗಾವಿ ಬಿಟ್ಟು ಬಹುತೇಕ ಕಡೆಗಳಿಗೆ ಶೇ 80ರಷ್ಟು ಸಮವಸ್ತ್ರ ವಿತರಣೆಯಾಗಿದೆ. ಎರಡು ಸೆಟï ಸಮವಸ್ತ್ರ ಪೈಕಿ ಒಂದು ಜತೆ ಸಮವಸ್ತ್ರ ಶೇ.100ರಷ್ಟು ಪೂರೈಕೆಯಾಗಿದೆ. ಇನ್ನೊಂದು ಜತೆ ಸಮವಸ್ತ್ರವನ್ನು ಸದ್ಯದಲ್ಲಿಯೇ ಪೂರೈಸಲಾಗುವುದು. ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ ಚೂಡಿದಾರ್ ಕೂಡ ಸದ್ಯದಲ್ಲೇ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಬಾರಿ ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ತಡ ಮಾಡದಿರಲು ಉದ್ದೇಶಿಸಿದೆ. ಪ್ರತಿವರ್ಷ ಇವುಗಳನ್ನು ತಡವಾಗಿ ವಿತರಿಸಿ, ಪ್ರತಿಪಕ್ಷಗಳ ಟೀಕೆಗೆ ತುತ್ತಾಗುತ್ತಿದ್ದ ಸರ್ಕಾರ ಈ ಬಾರಿ ಎಚ್ಚೆತ್ತುಕೊಂಡಿದೆ.   ಇನ್ನೊಂದು ವರ್ಷದಲ್ಲಿ ಚುನಾವಣೆ ಬರುತ್ತದೆ. ಯಾವುದೇ ಸಣ್ಣ ತಪ್ಪನ್ನೂ ಮಾಡಬೇಡಿ, ಸಣ್ಣ ತಪ್ಪು ಮಾಡಿದರೂ ಪ್ರತಿಪಕ್ಷಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟು ಸೂಚನೆ ನೀಡಿದ್ದಾರೆ.   ಇದೇ ಮೊದಲ ಬಾರಿಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಶಾಸಕರು ಶಾಲಾ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್, ಶೂ ವಿತರಿಸಲಿದ್ದು ಪ್ರತಿ ಕ್ಷೇತ್ರದ ಶಾಸಕರು 500 ಮಕ್ಕಳಿಗೆ ಸಾಂಕೇತಿಕವಾಗಿ ಪರಿಕರಗಳನ್ನು ಹಸ್ತಾಂತರಿಸಲಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಇದೇ ಮೊದಲ ಬಾರಿಗೆ ಸ್ಕರ್ಟ್ ಬದಲಾಗಿ ಚೂಡಿದಾರ್ ನೀಡಲು ಸರ್ಕಾರ ನಿರ್ಧರಿಸಿದೆ.

ಪ್ರತಿ ಬಾರಿ ಶಾಲೆ ಆರಂಭವಾಗಿ ಅರ್ಧವರ್ಷ ಕಳೆದಿದ್ದರೂ ಇನ್ನೂ ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಆಗುತ್ತಿರಲಿಲ್ಲ. ಆದರೆ ಈ ವರ್ಷ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಲಮಿತಿಯೊಳಗೆ ಎಲ್ಲವನ್ನೂ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.  ಕಳೆದ ಶೈಕ್ಷಣಿಕ ವರ್ಷದಲ್ಲಿ 1 ರಿಂದ 10 ನೇ ತರಗತಿಯಲ್ಲಿ ಮಾಡುವ ಎಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ನೀಡಲು ನಿರ್ಧರಿಸಲಾಗಿತ್ತು. ಆದರೆ ವಿಳಂಬದಿಂದಾಗಿ ಶೈಕ್ಷಣಿಕ ವರ್ಷ ಪೂರ್ಣಗೊಂಡ ಬಳಿಕ ಎಲ್ಲವನ್ನೂ ವಿತರಿಸಲಾಗಿತ್ತು. ಆ ಕಾರಣದಿಂದಾಗಿ ಆ ಸಾಲಿನಲ್ಲಿ ಸರ್ಕಾರ ಶೂ ಮತ್ತು ಸಾಕ್ಸ್‍ಗಳನ್ನು ನೀಡಿರಲಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಬರೋಬ್ಬರಿ 120 ಕೋಟಿ ರೂ ಉಳಿತಾಯವಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin