ಕವಿ ಹಾಗೂ ಸಾಹಿತಿ ಇನ್ನಿಲ್ಲ

Spread the love

KAVI-SHIVAANADA
ಚನ್ನಪಟ್ಟಣ, ಏ.15- ತಾಲ್ಲೂಕಿನ ನೀಲಕಂಠಹಳ್ಳಿ ಗ್ರಾಮದ ಕವಿ ಹಾಗೂ ಸಾಹಿತಿ ಶಿವಾನಂದ ನೀಲಕಂಠನ ಹಳ್ಳಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.ಕಳೆದ 7 ತಿಂಗಳಿಂದ ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಶಿವಾನಂದ್ ವೈದ್ಯಕೀಯ ಶುಶ್ರೂಷೆಗೊಳಪಟ್ಟಿದ್ದರು.ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆ ಉಸಿರೆಳೆದಿದ್ದಾರೆ ಅವರಿಗೆ 59 ವರ್ಷ ವಯಸ್ಸಾಗಿತ್ತು.ಶಿವಾನಂದ್ ಪತ್ನಿ ವಸಂತಶ್ರೀ, ಪುತ್ರಿಯರಾದ ಗಗನಶ್ರೀ, ಭುವನಶ್ರೀ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಇಂದು (ಶನಿವಾರ) ನಡೆಯಿತು.
ಕವಿಯಾಗಿ ತಾಲ್ಲೂಕಿನಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದ ಶಿವಾನಂದ್ ¾ತೊರೆ ಪತ್ರಿಕೆಯಲ್ಲಿ ಅಹರ್ನಿಶಿ ಸೇವೆಸಲ್ಲಿಸಿ ಚಿತ್ರ ಸಾಹಿತಿಯಾಗಿ ಬೆಂಗಳೂರು ಸೇರಿದ್ದರು.

ಹಲವಾರು ಕ್ಯಾಸೆಟ್‍ಗಳನ್ನು ಹೊರತಂದಿದ್ದ ಶಿವಾನಂದ್ ಅವರ ನಾಡಪ್ರಭು ಕೆಂಪೇಗೌಡರ ಕುರಿತಾದ ಕ್ಯಾಸೆಟ್ ಜನಪ್ರಿಯತೆ ಗಳಿಸಿತ್ತು.ಶಿವಾನಂದ್ ಅವರ ನಿಧನಕ್ಕೆ ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ನಿವೃತ್ತ ಪ್ರಾಂಶುಪಾಲ ಶಿವರಾಮೇಗೌಡ ನಾಗವಾರ, ಕ.ಕ.ಜ.ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ, ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಗುರುಮೂರ್ತಿ, ಪ್ರಧಾನಕಾರ್ಯದರ್ಶಿ ಲಕ್ಷ್ಮಿಪತಿ ಮಂಗಳವಾರಪೇಟೆ ಹಾಗೂ ಅನೇಕ ಗಣ್ಯರು ಸಂತಾ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin