ಕಾಂಗ್ರೆಸ್ ತೆಕ್ಕೆಗೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ

Spread the love

congrees

ಕೋಲಾರ,ಸೆ.16- ಕೋಲಾರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಮಹಾಲಕ್ಷ್ಮಿ ಪ್ರಸಾದ್ ಬಾಬು, ಸುಜಾತ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷದ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದು ಓರ್ವ ಸದಸ್ಯರ ಅಡ್ಡ ಮತದಾನದಿಂದ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನ ಕೈ ತಪ್ಪಿತ್ತು. ಕಾಂಗ್ರೆಸ್ ಪಕ್ಷದ ಮಹಾಲಕ್ಷ್ಮಿ 19 ಮತಗಳನ್ನು ಪಡೆದು ಮೂರು ಮತಗಳ ಅಂತರದಿಂದ ಜೆಡಿಎಸ್ ಪಕ್ಷದ ಸಾಕಮ್ಮನವರ ವಿರುದ್ಧ ಜಯಗಳಿಸಿದ್ದಾರೆ.
35 ಸ್ಥಾನವಿರುವ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸಂಸದರು ಮತ್ತು ಶಾಸಕರು ಮತ ಹಾಕುವ ಹಕ್ಕು ಪಡೆದಿರುವುದರಿಂದ ಒಟ್ಟು 37 ಮತದಾರರು ಮತ ಚಲಾಯಿಸುವಂತಾಯಿತು. ಜೆಡಿಎಸ್ ಸದಸ್ಯ ಸುಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಅಡ್ಡ ಮತದಾನ ಮಾಡಿದರು. ಜೆಡಿಎಸ್‍ನ ಅಫೆÇ್ರೀಜ್ ಪಾಷ ಮತ್ತು ಮುರುಳಿಗೌಡ ನಾಯಕ ಮೇಲಿನ ಅಸಮಾಧಾನದಿಂದ ಮತದಾನ ಪ್ರಕ್ರಿಯೆಗೆ ಗೈರು ಹಾಜರಾಗಿದ್ದರು.
ಉಪವಿಭಾಗಾಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಯಾಗಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin