ಕಾಂಗ್ರೆಸ್ ಮಾಡದ ಕೆಲಸ ಬಿಜೆಪಿ ಮಾಡಿದೆ : ನಾಗರಾಜ್

maluru

ಮಾಲೂರು, ಆ.15-ಎಪ್ಪತ್ತು ವರ್ಷಗಳು ಕಳೆದರೂ ಸಹ ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ ಮಾಡುತ್ತಿರುವುದು ಬಿಜೆಪಿಯ ನೈತಿಕತೆಗೆ ತಾಜಾ ಉದಾಹರಣೆಯಾಗಿದೆ ಎಂದು ಮಾಜಿ ಶಾಸಕ ಎ.ನಾಗರಾಜ್ ತಿಳಿಸಿದರು.  ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರ ಸರ್ಕಾರವು ಮುಂಬೈನ ಬಾದರ್ ಸಮುದ್ರ ತೀರದಲ್ಲಿ ಬಾಬಾಸಾಹೇಬ್‍ರ ಚೈತ್ಯ ಭೂಮಿ ಕೇವಲ 4 ಗುಂಟೆಯಷ್ಟಿದನ್ನ 13.5 ಎಕರೆ ಪ್ರದೇಶದಲ್ಲಿ ಅಭಿವೃದ್ದಿ ಪಡಿಸುತ್ತಿದ್ದಾರೆ ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ಗೀತಮ್ಮವೆಂಕಟೇಶ್, ಉಪಾಧ್ಯಕ್ಷೆ ಶ್ರೀವಳ್ಳಿ, ಸದಸ್ಯೆ ಭಾರತಮ್ಮನಂಜುಂಡಪ್ಪ, ಮಾಜಿ ತಾಪಂ ಉಪಾಧ್ಯಕ್ಷ ಎಸ್.ವಿ.ಲೋಕೇಶ್, ಬಿಜೆಪಿಯ ದೇವರಾಜರೆಡ್ಡಿ, ಕೃಷ್ಣಾರೆಡ್ಡಿ, ಬಿ.ಆರ್.ವೆಂಕಟೇಶ್, ವಾಸುದೇವನ್, ಗೋವಿಂದಸ್ವಾಮಿ, ಬಡಗಿ ತಂಗರಾಜು, ಶ್ರೀನಿವಾಸ್, ದೊಡ್ಡಿರಾಜಪ್ಪ, ಶ್ರೀಹರಿ, ಆರಾಧನವೇಣು ಎಂ.ವಿ.ಶ್ರೀನಿವಾಸ್, ಗುರುನಾಥ್‍ರೆಡ್ಡಿ, ಸಿ.ಸುರೇಶ್, ಅಶ್ವಥ್, ದೇವರಾಜ್ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin