ಕಾಂಗ್ರೇಸ್, ಬಿಜೆಪಿ ಪಕ್ಷಗಳಿಂದ ಇಂದಿನ ವ್ಯವಸ್ಥೆ ಹಾಳಾಗಿದೆ : ದೇವೇಗೌಡ
ನಂಜನಗೂಡು, ಮಾ.3- ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಂದಿನ ವ್ಯವಸ್ಥೆಗಳನ್ನು ಸರಿಪಡಿಸಲಾಗದಷ್ಟು ಹಾಳು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಿಡಿಕಾರಿದ್ದಾರೆ.ಅವರು ಧರ್ಮಪತ್ನಿ ಚೆನ್ನಮ್ಮರವರೊಂದಿಗೆ ಶ್ರೀಕಂಠೇಶ್ವರ ದೇವಸ್ಥಾನ ಆಗಮಿಸಿ, ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಹಿತ ಕಾಪಾಡುವುದು ಅಧಿಕಾರ ನಡೆಸುತ್ತಿರುವವರಿಗೆ ಬೇಕಾಗಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿ ಕುಡಿಯುವ ನೀರಿಗೂ ತೊಂದರೆಯುಂಟಾಗಿದೆ. ತಮಿಳುನಾಡಿಗೆ 30 ಟಿಎಂಸಿ ನೀರು ಕಪಿಲಾ ನದಿಯಿಂದ ಮೆಟ್ಟೂರು ಡ್ಯಾಂಗೆ ಹರಿದು ಹೋಗುತ್ತಿದೆ. ನಮಗೆ ಬೇಕಾಗಿರುವುದು 17 ಟಿಎಂಸಿ ಮಾತ್ರ ನೀರಾವರಿ ಯೋಜನೆಗಳನ್ನು ಕೈಗೊಂಡು ನೀರನ್ನು ಶೇಖರಿಸುವ ಯೋಜನೆಯನ್ನು ಯಾವ ಸರ್ಕಾರವು ಮಾಡಲಿಲ್ಲಾ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲ್ಲೂಕು ಅಧ್ಯಕ್ಷ ಆರ್.ವಿ, ಮಹದೇವಸ್ವಾಮಿ, ಹಿರಿಯ ಲೆಕ್ಕ ಪರಿಶೋಧಕ ರವಿಚಂದ್ರಗೌಡ, ಜೆಡಿಎಸ್ ಮುಖಂಡ ಶಿವಕುಮಾರಸ್ವಾಮಿ, ಮಾಜಿ ಶಾಸಕ ಮಹದೇವು, ನಗರಾಧ್ಯಕ್ಷ ಭಾಸ್ಕರ್ ಗೌಡ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಶಿವಕುಮಾರ್, ದೇವರಸನಹಳ್ಳಿ ನರಸಿಂಹಯ್ಯ, ಮಾಜಿ ಪುರಸಭಾ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ಗೌಡ, ಕಾರ್ಯಕರ್ತರು ಇದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS