ಕಾಂಪೌಂಡ್‍ಗೆ ಅಪ್ಪಳಿಸಿದ ಬೈಕ್ : ಸವಾರ ಸಾವು

bike--accident

ಮೈಸೂರು, ಆ.17- ಕೆಲಸ ಮುಗಿಸಿಕೊಂಡು ತಡರಾತ್ರಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಕಾಂಪೌಂಡ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ಎನ್‍ಆರ್ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಸರೆ ನಾಯ್ಡು ನಗರದ ನಿವಾಸಿ ನಾಗೇಂದ್ರ ಕುಮಾರ್ (24) ಮೃತಪಟ್ಟ ದುರ್ದೈವಿ.ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಇವರು ರಾತ್ರಿ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಹೋಗುತ್ತಿದ್ದಾಗ ಮೈಸೂರು-ಬೆಂಗಳೂರು ರಸ್ತೆಯ ಎಲ್‍ಐಸಿ ಕಚೇರಿ ಬಳಿ ತಿರುವು ಪಡೆಯುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಕಾಂಪೌಂಡ್‍ಗೆ ಅಪ್ಪಳಿಸಿದೆ. ಪರಿಣಾಮವಾಗಿ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಡರಾತ್ರಿಯಾಗಿದ್ದರಿಂದ ಈ ಮಾರ್ಗದಲ್ಲಿ ಯಾರೂ ಸಂಚರಿಸದ ಕಾರಣ ಈ ಅಪಘಾತ ಗೊತ್ತೇ ಆಗಿಲ್ಲ. ಬಹುಶಃ ಗೊತ್ತಾಗಿದ್ದರೆ ಅಪಘಾತ ಸಂಭವಿಸಿದ ತಕ್ಷಣ ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುಳಿಯುತ್ತಿದ್ದನೋ ಏನೋ.
ಬೆಳಗಿನ ಜಾವ 2.30ರಲ್ಲಿ ಈ ಮಾರ್ಗದಲ್ಲಿ ಬಂದ ಬೀಟ್ ಪೊಲೀಸರು ರಸ್ತೆ ಬದಿ ಬೈಕ್ ಬಿದ್ದಿರುವುದು ಗಮನಿಸಿ ಸಮೀಪ ಹೋಗಿ ನೋಡಲಾಗಿ ತಲೆಯಿಂದ ತೀವ್ರ ರಕ್ತಸ್ರಾವವಾಗಿ ಬೈಕ್ ಸವಾರ ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ.ತಕ್ಷಣ ಎನ್‍ಆರ್ ಸಂಚಾರಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಡಿಸಿಪಿ ಶೇಖರ್, ರುದ್ರಮುನಿ ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿ ಮೃತನ ಜೇಬಿನಲ್ಲಿದ್ದ ಗುರುತಿನ ಚೀಟಿಯ ಸಹಾಯದಿಂದ ಪೋಷಕರಿಗೆ ವಿಷಯ ತಿಳಿಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮೈಸೂರು ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin