ಕಾಡಿನ ಮಕ್ಕಳ ಒಕ್ಕಲೆಬ್ಬಿಸಲು ವ್ಯವಸ್ಥಿತ ಷಡ್ಯಂತ್ರ

Spread the love

ಬೆಂಗಳೂರು, ಮಾ.6- ಎಸ್‍ಇಝೆಡ್ ಎಂಬ ಭೂತವನ್ನು ಮುಂದೆ ಬಿಟ್ಟು ಕಾಡಿನ ಮಕ್ಕಳನ್ನು ವ್ಯವಸ್ಥಿತವಾಗಿ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಉಪನ್ಯಾಸಕ ಡಾ.ರಮೇಶ್ ಚಂದ್ರಗುಪ್ತ ವಿಷಾದಿಸಿದರು.ಕನ್ನಡ ಯುವಜನ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಭೂಮಿ-ನಮ್ಮ ಹಕ್ಕು ಕುರಿತು ಉಪನ್ಯಾಸ ನೀಡುತ್ತಾ ಸ್ವಾತಂತ್ರ್ಯ ನಂತರ ಬಂದ ಸರ್ಕಾರಗಳು ರೆಡ್ ಕಾರ್ಪೆಟ್ ಹಾಸಿ ಐಟಿಬಿಟಿ ಅಭಿವೃದ್ಧಿ ಹೆಸರಿನಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.ನಮ್ಮದೇ ಆದ ಭೂಮಿಯಲ್ಲಿ ನಾವು ನೆಮ್ಮದಿಯಿಂದ ವಾಸಿಸಲು ಅವಕಾಶವಿಲ್ಲ ನೂರೆಂಟು ಕಾನೂನುಗಳನ್ನು ಹಚ್ಚಿ ಬಡ ಜನತೆ ಜೀವನ ಸಾಗಿಸುವುದಕ್ಕೆ ವ್ಯವಸ್ಥೆ ಬಿಡುತ್ತಿಲ್ಲ. ವಾಸಿಸಲು ಸೂರು ಇಲ್ಲ. ಅದೇ ಶ್ರೀಮಂತರು ಅರಣ್ಯ ಭೂಮಿಗಳಲ್ಲಿ ರೆಸಾರ್ಟ್ ಮಾಡಿಕೊಂಡಿದ್ದಾರೆ.

ಬಡವರ ಭೂಮಿಯನ್ನು ನಿರ್ದಾಕ್ಷಿಣ್ಯವಾಗಿ ಕಿತ್ತುಕೊಂಡು ಬೀದಿ ಪಾಲು ಮಾಡುವ ಜನ ಉಳ್ಳವರು ಅಕ್ರಮವಾಗಿ ಆಸ್ಪತ್ರೆ ಕಟ್ಟಿಕೊಂಡು ವ್ಯಾಪಾರ ಮಾಡಿಕೊಂಡಿದ್ದರೆ ಸುಮ್ಮನೆ ಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಪತ್ರಕರ್ತ ಕೆ.ಜಿ.ಮಹಾನಿಭವಿಮಠ ಮಾತನಾಡಿ, ಈ ದೇಶ ಉದ್ಧಾರವಾಗಬೇಕಾದರೆ ಜಾತೀಯತೆ ಪಿಡುಗು ಮತ್ತು ಏಕರೂಪದ ನಾಗರಿಕತೆ ಜಾರಿತರಲು ಎಲ್ಲರೂ ವೈಯಕ್ತಿಕತೆ ಸ್ವಾರ್ಥ ಬದಿಗಿಟ್ಟು ಶ್ರಮಿಸಬೇಕು. ಅಲ್ಲದೆ, ಅಬ್ದುಲ್ ಕಲಾಂ ವೈಚಾರಿಕತೆ ತಾಂತ್ರಿಕತೆ ವೈಜ್ಞಾನಿಕೆಯ ತತ್ವವನ್ನು ಅಳವಡಿಸಿಕೊಂಡು ದೇಶವನ್ನು ಮುನ್ನಡೆಸಿದರೆ ದೇಶೋದ್ಧಾರವಾಗಲು ಸಾಧ್ಯ ಎಂದರು. ಕನ್ನಡ ಯುವಜನ ಸಂಘದ ಅಧ್ಯಕ್ಷ ಜಗದೀಶರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಮಂಜುಳಾ ಆರಾಧ್ಯ ಮತ್ತು ಆಶಾ ಗೀತೆ ಹಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin