ಕಾನೂನು ಉಲ್ಲಂಘಸಿ ಮರ ಸಾಗಾಣೆ : ಆರೋಪ

ee-sanje

ಚಿಕ್ಕಮಗಳೂರು, ಆ.9- ಚಿಕ್ಕಮಗಳೂರು ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ಒಂದು ಕಾಫಿ ತೋಟ ಅಡಿಕೆ ಹಾಗೂ ದಟ್ಟವಾದ ಅರಣ್ಯ ಹೊಂದಿರುವ ಪ್ರದೇಶ. ಆದರೆ ನಿಯಾಮಾಸಾರ ಮರಗಳನ್ನು ಕಡಿತಲೆ ಮಾಡದೇ ನಿಯಾಮ ಮೀರಿ ಇಂದಿಗೂ ಮರಗಳನ್ನು ಸಾಗುತ್ತಿರುವುದನ್ನು ಖಂಡಿಸುತ್ತೇವೆ.ರಾಜ್ಯದ ಯವುದೇ ಭಾಗಗಳಲ್ಲಿ, ಮಳೆಗಾಲಗಳಲ್ಲಿ ಬಹು ಮುಖ್ಯವಾಗಿ ಜೂನ್ ತಿಂಗಳಿಂದ ಡಿಸೆಂಬರ್‍ವರೆಗೆ ಮರ ಕಡಿಯುವುದನ್ನು ಮತ್ತು ಸಾಗಣಿಕೆಯನ್ನು ನಿರ್ಬಂದಿಸಲಾಗಿದೆ. ಈ ರೀತಿ ಸರ್ಕಾರದ ನಿಯಮವಿದ್ದರು ಯಾವುದೇ ಬೆಲೆ ಕೊಡದೆ ಇಂದಿಗೂ ಮರಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಇದಕ್ಕೆ ಅರಣ್ಯ ಅಧಿಕಾರಿಗಳಿಗೆ ನೆರವಾಗಿ ಕೈ ಜೋಡಿಸಿ ಅಕ್ರಮ ಮರ ಸಾಗಿಸಲು ಸಹಕಾರಿಯಗುತ್ತಿರುವುದು ವಿಪರ್ಯಾಸ.
ಪ್ರತಿದಿನ ಪ್ರತಿ ಲಾರಿ 30 ಟನ್‍ಗಳನ್ನು ಬಾರವನ್ನು ಹೊತ್ತು ಮಲೆನಾಡು ಭಾಗಗಳಲ್ಲಿ ಇಂದಿಗೂ ಸಾಗುತ್ತಿರುವುದು ಅಪಘಾತ ಮತ್ತು ಪರಿಸರ ಹಾನಿಗೆ ಕಾರಣವಾಗುತ್ತಿದೆ. ಹತ್ತಾರು ವರ್ಷಗಳ ನಂತರ ಹಳ್ಳಿಗಳಿಗೆ ಒಂದೊಂದು ಸಣ್ಣ ರಸ್ತೆಗಳನ್ನು ಡಾಂಬರಿಕರಣ ಮಾಡಲಾಗಿದೆ. ಮಳೆಗಾಲದಲ್ಲಿ ನೆನೆದು ಪಾಚಿ ಕಟ್ಟಿರುವ ರಸ್ತೆಯಲ್ಲಿ ಟಿಂಬರ್ ಲಾರಿಗಳು ಸಾಗಿದರೆ ರಸ್ತೆಯು ಏನಗುತ್ತದೆ ಎಂಬುದು ತಿಳಿಯಲು ಸಾಮಾನ್ಯ ಜ್ಞಾನ ಸಾಕು. ಇದರಿಂದ ತಕ್ಕ ಮಟ್ಟಿಗೆ ರಸ್ತೆಯನ್ನು ಮಾಡಿದ ಗುತ್ತಿಗೆದಾರನ ವೃತ್ತಿಗೆ ಮತ್ತು ಅಧಿಕಾರಿಗಳಿಗೆ ಕಳಂಕ ಬರುವುದು ಖಂಡಿತ. ಹಾಗೂ ಬಹುಪಾಲು ತೋಟದ ಮಾಲೀಕರು ರಸ್ತೆಯಿಂದ 20 ಅಡಿಯನ್ನು ಜಾಗವನ್ನು ಬಿಡದೆ ರಸ್ತೆಯ ಪಕ್ಕಕ್ಕೆ ಬೇಲಿ ಮಾಡಿರುತ್ತಾರೆ.

 

ಇಂದರಿಂದ ಮರಗಳನ್ನು ರಸ್ತೆಯಲ್ಲಿ ಹಾಕುವುದರಿಂದ ರಸ್ತೆಯು ಹಾಳಾಗುತ್ತ ಮತ್ತು ಗುಂಡಿಯು ಬಿಳುತ್ತದೆ. ಇದರಿಂದ ಜನರಿಗೆ ತೊಂದರೆಯ ಆಗುತ್ತದೆ. ಮತ್ತು ಅಪಘಾತ ಸಂಬವಿಸುತ್ತದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಮರ ತುಂಬುತ್ತಿದ್ದಾಗ ಬೇರೆ ವಾಹನಕ್ಕೆ ಬಾರಿ ಇಳಿಸಲು ಸಾಧ್ಯವಾಗುತ್ತಿಲ್ಲ, ಕಾರಣ ಮಲೆನಾಡಿನ ಮಣ್ಣು ನೆನೆದು ಕುಸಿಯುತ್ತದೆ. ಇನ್ನು ಟಿಂಬರ್ ಕಾರ್ಮಿಕರ ಗೋಳು ಕೆಳವವರು ಇಲ್ಲಾ. ಆದ್ದರಿಂದ ಮಳೆಗಾಲದಲ್ಲಿ ಇಂದರಿಂದ ಅಗುವ ಅಪಘಾತ, ಗಲಭೆ, ಪರಿಸರ ನಾಶ, ಹಲವು ತೊಂದರೆಗಳನ್ನು ನಿಲ್ಲಿಸಲು ಕೂಡಲೆ ಅರಣ್ಯಧಿಕಾರಿಗಳ ಮೇಲೆ ಮತ್ತು ಮರ ಸಾಗಣಿಕೆ ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ.
ಬೇಡಿಕೆಗಳು;
1.ಕೂಡಲೇ ಮರಗಳಿಗೆ ಪರವಾನಿ ನೀಡುವುದನ್ನು ನಿಲ್ಲಿಸಬೇಕು.
2.ಅಕ್ರಮವಾಗಿ ಮರಗಳನ್ನು ಸಾಗಿರುವುದನ್ನು ಬಂಧಿಸಬೇಕು.
3.ಸಂಬಂಧಿಸಿದ ಅರಣ್ಯ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು.
4.ಸಾರ್ವಜನಿಕರು ದೂರು ದಾಖಲಿಸುವಂತೆ ಸೂಕ್ತ ಮತ್ತು ವಿಶೇಷ ಅನುಕೂಲ ಕಲ್ಪಿಸಬೇಕು.
ಡಿ .ಎ. ಶ್ರೀನಿವಾಸ್, ರಾಜ್ಯ ಸಂಘಟನಾ ಸಂಚಾಲಕ, ದಲಿತ ಸಂಘರ್ಷ ಸಮಿತಿ, ಚಿಕ್ಕಮಗಳೂರು. ರಮೇಶ್ ಎಂ, ಜಿಲ್ಲಾ ಖಾಚಾಂಜಿ, ಪುಟ್ಟಸ್ವಾಮಿ, ಹಾಗೂ ಕುಮಾರ್ ಇದ್ದರು

Sri Raghav

Admin