ಕಾನೂನು ಪದವಿ ಪರೀಕ್ಷೆಯಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು ಡುಮ್ಕಿ..!

Exam-Law

ಅಗ್ರಾ, ಜ.17-ಐದು ವರ್ಷದ ಕಾನೂನು ಪದವಿಗೆ ಪರೀಕ್ಷೆ ಬರೆದಿದ್ದ 1,700 ವಿದ್ಯಾರ್ಥಿಗಳ ಫಲಿತಾಂಶವನ್ನು ಇಲ್ಲಿನ ಬಿ.ಆರ್ ಅಂಬೇಡ್ಕರ್ ವಿಶ್ವವಿದ್ಯಾನಿಲಯ ಪ್ರಕಟಿಸಿದ್ದು, ಶೇ.90ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ವಿವಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಕಟ್ಟುನಿಟ್ಟುಗೊಳಿಸಿದ ಪರಿಣಾಮ ವಿದ್ಯಾರ್ಥಿಗಳ ಬಣ್ಣ ಬಯಲಾಗುತ್ತಿದೆ.  ಇದಲ್ಲದೇ ಉಳಿದ 15,000 ಕಾನೂನು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಜ.20ರಂದು ಪ್ರಕಟಗೊಳ್ಳಲಿದ್ದು, ಅದರಲ್ಲೂ ಶೇ.90ಕ್ಕಿಂತ ಹೆಚ್ಚು ಫೇಲ್ ಪ್ರಹಸನ ಪುನರಾವರ್ತನೆಯಾಗುವ ಸೂಚನೆಗಳಿವೆ.
ನಕಲು, ಹಾಗೂ ಅವ್ಯವಹಾರ ತಡೆಗಟ್ಟಲು ಈ ಬಾರಿ ವಿಶ್ವವಿದ್ಯಾಲಯದ ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಕಳೆದ ಡಿ.13ರಂದು ವಿವಿ ಉಪಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಡಾ.ಅರವಿಂದ್ ದೀಕ್ಷಿತ್ ಕೆಲವೊಂದು ನಿಷ್ಠುರ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಇದರಂತೆ ಮಾಮೂಲಿ ಸಿಬ್ಬಂದಿ ಬದಲಿಗೆ ನಿವೃತ್ತ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದಿತ್ತು.  ಪರೀಕ್ಷೆ ಕಬ್ಬಿಣದ ಕಡಲೆಯಾದ ಕಾರಣ ಬಹುತೇಕ ವಿದ್ಯಾರ್ಥಿಗಳು ಖಾಲಿ ಉತ್ತರ ಪತ್ರಿಕೆಯನ್ನು ನೀಡಿದ್ದರೆ, ಕೆಲವರು ಮಾತ್ರ ಒಂದು ಅಥವಾ ಎರಡು ಪ್ರಶ್ನೆಗಳಿಗೆ ಉತ್ತರಿಸಿದ್ದರು.

ಇದನ್ನು ವಿಸಿ ಗಮನಕ್ಕೆ ತಂದಾಗ ಮುಂದಿನ ದಿನಗಳಲ್ಲಿ ಯಾವುದೇ ಅವ್ಯವಹಾರ ತಡೆಗಟ್ಟಲು ಎಲ್ಲ ಉತ್ತರ ಪ್ರತಿಕೆಗಳನ್ನು ಸ್ಕ್ಯಾನ್ ಮಾಡುವಂತೆ ತಿಳಿಸಿದ್ದರು. ವಿದ್ಯಾರ್ಥಿಗಳಿಂದ ಪರೀಕ್ಷೆಯಲ್ಲಿ ಖಾಲಿ ಉತ್ತರಪತ್ರಿಕೆಗಳನ್ನು ಪಡೆದು ಉತ್ತರಗಳನ್ನು ಬರೆದು ಅವ್ಯವಹಾರ ನಡೆಸುವ ವ್ಯವಸ್ಥಿತ ಜÁಲಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin