ಕಾನೂನು ಹೋರಾಟಕ್ಕಿಳಿದ ಸೈರಸ್ ಮಿಸ್ತ್ರಿ

Tata-01

ಮುಂಬೈ ಅ.25 : ಅನೀರಿಕ್ಷಿತ ಬೆಳವಣಿಗೆಯೊಂದರಲ್ಲಿ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ನ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿರುವ ವಿಚಾರವೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಈ ರೀತಿ ತನ್ನನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿರುವುದು ಸರಿಯಲ್ಲ ಎಂದು ಮಿಸ್ತ್ರಿ ಹೇಳಿದ್ದು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ಮಿಸ್ತ್ರಿ ಅವರು ಟಾಟಾ ಗ್ರೂಪ್ ಸಂಸ್ಥೆಯ ಹಂಗಾಮಿ ಅಧ್ಯಕ್ಷರಾಗಿರುವ ರತನ್ ಟಾಟಾ ಮತ್ತು ಟಾಟಾ ಟ್ರಸ್ಟ್ ವಿರುದ್ಧ ದೇಶೀಯ ಕಂಪನಿಯ ಕಾನೂನು ಟ್ರಿಬ್ಯೂನಲ್ ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.

ಮಿಸ್ತ್ರಿ ಅವರನ್ನು ವಜಾ ಮಾಡಿರುವ ಬಗ್ಗೆ ಅವರಾಗಲೀ ಅವರ ಕುಟುಂಬದ ಶಪೂರ್ಜಿ ಪಲ್ಲೊಂಜಿ ಗ್ರೂಪ್ ಅರ್ಜಿ ಸಲ್ಲಿಸಿದರೆ ಅದರ ವಿರುದ್ಧ ಕೇವಿಯಟ್ ನೀಡುವಂತೆ ಟಾಟಾ ಮುಂಬೈ ಹೈಕೋರ್ಟ್, ದೆಹಲಿ ಹೈಕೋರ್ಟ್ ಮತ್ತು ದೇಶಿಯ ಕಂಪನಿಯ ಕಾನೂನು ಟ್ರಿಬ್ಯೂನಲ್ ಮೊರೆ ಹೋಗಿದ್ದಾರೆ.

► Follow us on –  Facebook / Twitter  / Google+

 

Sri Raghav

Admin