ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ 2 ಆನೆಗಳು : ಜನರಲ್ಲಿ ಆತಂಕ

elephant

ಬೇಲೂರು, ಅ.18-ತಾಲೂಕಿನ ಎರಡು ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಗೆಂಡೇಹಳ್ಳಿ ಸಮೀಪದ ಗೋರಿಮಠ ಗ್ರಾಮದ ನಂಜೇಗೌಡ ಎಂಬವವರ ಕಾಫಿ ತೋಟಗಳಲ್ಲಿ ಎರಡು ಗಂಡು ಆನೆಗಳು ಬೀಡು ಬಿಟ್ಟಿದ್ದು, ಈ ಭಾಗದ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.ಕಳೆದ 5 ದಿನಗಳಿಂದ ಹಗರೆ ವ್ಯಾಪ್ತಿಯಿಂದ ಗೆಂಡೇಹಳ್ಳಿ ಕಡೆಗೆ ಈ ಆನೆಗಳು ಬಂದಿರಬಹುದು ಎಂದು ಊಹಿಸಲಾಗಿದೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಎರೆಡು ಆನೆಗಳನ್ನು ಬೇಲೂರು ವ್ಯಾಪ್ತಿಯಿಂದ ಒಡಿಸಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಆನೆಗಳು ಓಡಾಡುತ್ತಿರುವ ಈ ಭಾಗದಲ್ಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಕೆಲಸಕ್ಕೆ ತೆರಳದಂತೆ ಮತ್ತು ಓಡಾಡದಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin