ಕಾಬೂಲ್ ನಲ್ಲಿರುವ ಅಮೆರಿಕ ವಿವಿ ಮೇಲೆ ಉಗ್ರರು ನಡೆಸಿದ ದಾಳಿಗೆ 12 ಮಂದಿ ಸಾವು

Spread the love

Attack

ಕಾಬೂಲ್, ಆ.25– ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿರುವ ಅಮೆರಿಕನ್ ಯೂನಿವರ್ಸಿಟಿ ಆಫ್ ಆಫ್ಘಾನಿಸ್ಥಾನ್ ಮೇಲೆ ಉಗ್ರರು ನಡೆಸಿದ ದಾಳಿ ಮತ್ತು ನಂತರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 12 ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆತಂಕಕ್ಕೆ ಒಳಗಾಗಿದ್ದ 700 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.  ಕಾಬೂಲ್ನಲ್ಲಿರುವ ಅಮೆರಿಕ ವಿಶ್ವವಿದ್ಯಾಲಯದ ಮೇಲೆ ನಿನ್ನೆ ಉಗ್ರರು ಆಕ್ರಮಣ ನಡೆಸಿದ್ದರು. ಸುಮಾರು 10 ಗಂಟೆಗಳ ಕಾಲ ಸೆಣಸಿದ ಪೊಲೀಸರು ಇಬ್ಬರು ಉಗ್ರಗಾಮಿಗಳನ್ನು ಕೊಂದು ವಿವಿಯನ್ನು ಮುಕ್ತಗೊಳಿಸಿದರು ಎಂದು ಕಾಬೂಲ್ನ ಅಪರಾಧ ತನಿಖಾ ಇಲಾಖೆ ಮುಖ್ಯಸ್ಥ ಫ್ರಾಯ್ದೂನ್ ಓಬೈದಿ ಹೇಳಿದ್ದಾರೆ.

ಈ ಕಾರ್ಯಾಚರಣೆಯಲ್ಲಿ 12 ವಿದ್ಯಾರ್ಥಿಗಳು ಮತ್ತು ಮೂವರು ಪೊಲೀಸರು ಸಹ ಹತರಾಗಿದ್ದಾರೆ. ವಿದೇಶಿ ಉಪನ್ಯಾಸಕರೂ ಸೇರಿದಂತೆ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸ್ ವಿಭಾಗದ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.  2006ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ ಉಗ್ರರ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin