ಕಾಮಗಾರಿಗಳ ಹೆಸರಿನಲ್ಲಿ ಹಣ ಲೂಟಿ : ಶಾಸಕರ ವಿರುದ್ಧ ಆರೋಪ

ಹಿರಿಯೂರು, ಮಾ.10-ಕಳೆದ ಎಂಟು ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕ ಡಿ.ಸುಧಾಕರ್ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಅಕ್ರಮ ಮರಳು ದಂಧೆ ಮತ್ತು ಕಳಪೆ ಕಾಮಗಾರಿಗಳ ಮೂಲಕ ಕೋಟಿಗಟ್ಟಲೆ ಹಣ ಲೂಟಿ ಮಾಡಿ ಕ್ಷೇತ್ರದ ಜನತೆಗೆ ವಂಚಿಸಿದ್ದಾರೆ ಎಂದು ರಾಜ್ಯ ಒಬಿಸಿ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಆರೋಪಿಸಿದರು.
ಮುಂಬರುವ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ನಿನ್ನೆ ತಾಲ್ಲೂಕು ಕಚೇರಿ ಮುಂದೆ ಹಿರಿಯೂರು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲ್ಲೂಕು ಭೀಕರ ಬರಗಾಲಕ್ಕೆ ತುತ್ತಾಗಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಸಿಗದೆ ರೈತರು ಕಂಗಾಲಾಗಿದ್ದು ಗೋಶಾಲೆಗಳನ್ನು ನೆಪಮಾತ್ರಕ್ಕೆ ಪ್ರಾರಂಭಿಸಲಾಗಿದೆ ಎಂದು ದೂರಿದರು.

ಈ ಬಗ್ಗೆ ಜಾಣ ಕುರುಡು ಜಾಣ ಕಿವುಡು ಪ್ರದರ್ಶಿಸುತ್ತಿರುವ ಶಾಸಕರು ಕಳಪೆ ಕಾಮಗಾರಿಗಳ ಮೂಲಕ ಲೂಟಿ ಮಾಡಿದ ಹಣವನ್ನು ಮುಂಬರುವ ಚುನಾವಣೆಗೆ ಬಳಸಲು ಸಿದ್ಧರಾಗಿದ್ದಾರೆ ಎಂದು ಆಪಾದಿಸಿದರು.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ರೈತರ ಸಮುದಾಯಕ್ಕೆ ಆತ್ಮ ವಿಶ್ವಾಸ ತುಂಬಲು ಜಿಲ್ಲಾ ಸಚಿವರು ಕೇಂದ್ರ ಸ್ಥಾನದಲ್ಲಿ ಮೊಕ್ಕಾಂ ಹೂಡಿ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು. ತಾಲ್ಲೂಕು ಅಧ್ಯಕ್ಷ ಕೆ.ದ್ಯಾಮಣ್ಣ, ಪ್ರಧಾನಕಾರ್ಯದರ್ಶಿಗಳಾದ ಕೇಶವಮೂರ್ತಿ, ಎನ್.ಚಿತ್ತಯ್ಯ, ತಾ. ಪಂ. ಸದಸ್ಯ ಜಿ.ಪಿ.ಯಶವಂತರಾಜ್, ನಗರಸಭಾ ಅಧ್ಯಕ್ಷ ಟಿ.ಚಂದ್ರಶೇಖರ್, ಸದಸ್ಯರಾದ ಜಿ.ಪ್ರೇಮ್‍ಕುಮಾರ್, ನಟರಾಜ್, ಚಿರಂಜೀವಿ, ಟಿ.ಮಂಜುಳ, ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷರಾದ ಬಿ.ಆರ್.ಮಂಜುನಾಥ್, ಬಿ.ಕೆ.ಉಗ್ರಮೂರ್ತಿ, ಎಂ.ಎಸ್.ರಾಘವೇಂದ್ರ, ಎಂ.ವಿ.ಹರ್ಷ, ಜಿ.ಸೋಮಶೇಖರ್, ರಂಗನಾಥ್, ವೆಂಕಟೇಶ್, ವಿಶ್ವನಾಥ್ ಮತ್ತಿತರರು ಪಾಲ್ಗೊಂಡಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin