ಕಾಮಗಾರಿ ಗುಣಮಟ್ಟ ಪರೀಕ್ಷೆಗೆ ವಿಶೇಷ ಜಾಗೃತಿ ದಳ : ಖಂಡ್ರೆ
ಬೆಳಗಾವಿ,ಸೆ.2- ನಗರ ಸಭೆ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಸಲುವಾಗಿ ವಿಶೇಷ ಜಗೃತ ದಳ ನಿಯೋಜಿಸಲಾಗುವುದು ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದರು. ಅವರು ನಿನ್ನೆ ನಗರದ ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ವಿಶೇಷ ಜÁಗೃತದಳದಲ್ಲಿ ಇಂಜಿನಿಯರ್, ನಗರಾಭಿವೃದ್ದಿ ಪ್ರಾಧಿಕಾರದ ತಜ್ಞರು, ಲೆಕ್ಕಪತ್ರ ಪರಿಣಿತರು ಇರುತ್ತಾರೆ. ಕಾಮಗಾರಿ ಗುಣಮಟ್ಟದ ಮೇಲೆ ಈ ವಿಶೇಷ ಜÁಗೃತ ದಳ ನಿಗಾ ಇರಿಸಲಿದೆ. ಯಾವುದೇ ದೂರು ಬಂದಲ್ಲಿ ಪರಿಶೀಲಿಸಲಾಗುವುದು. ಗುಣಮಟ್ಟ ಸರಿ ಇಲ್ಲದಿದ್ದರೆ, ಕಠಿಣಕ್ರಮ ಜರುಗಿಸಲಾಗುವುದು ಎಂದರು.
ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯವ ವ್ಯವಸ್ಥೆಯಲ್ಲಿ ನಕಲಿ ಕಾರ್ಮಿಕರ ಖಾತೆಗಳನ್ನು ತೆರೆಯಲಾದ ಬಗ್ಗೆ ದೂರು ಇದ್ದು, ಈ ಕುರಿತು ತನಿಖೆಗೆ ಸೂಚನೆ ನೀಡಲಾಗಿದೆ. ಪೌರ ಕಾರ್ಮಿಕರ ವೇತನ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ಆದಷ್ಟು ಬೇಗನೆ ವೇತನ ಹೆಚ್ಚಳ ಮಾಡಿ ವೇತನವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡಲು ನಿರ್ಧರಿಸಲಾಗಿದೆ ಎಂದರು. ಸಿಬ್ಬಂದಿ ಕೊರತೆ ಸಮಸ್ಯೆ ಹಿನ್ನೆಲೆಯಲ್ಲಿ ನಿವೃತ್ತ ಇಂಜಿನಿಯರ್ಗಳನ್ನು ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿ 5 ವರ್ಷಕ್ಕೆ ಏರಿಸಿದ ಮಾದರಿಯಲ್ಲಿ ತಾ.ಪಂ. , ಗ್ರಾ.ಪಂ. ಅಧ್ಯಕ್ಷರ ಅಧಿಕಾರಾವಧಿಯನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದರು. ಪ್ರತಿಯೊಂದು ವಾರ್ಡ್ನಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುವಂತೆ ವಾರ್ಡ್ ಸಮಿತಿ ರಚನೆ ಮಾಡಲಾಗುವುದು.
ವಾರ್ಡ್ ಸಮಿತಿ ರಚನೆ ಬಗ್ಗೆ ಸಚಿವ ಸಂಪುಟದ ಮುಂದೆ ತೀರ್ಮಾನ ತೆಗೆದುಕೊ ಳ್ಳಲಾಗುವುದು. ಈ ವರ್ಷದ ಅಂತ್ಯದ ಒಳಗೆ ಸಣ್ಣ ಮತ್ತು ಮಧ್ಯಮ ಪಟ್ಟಣಗಳ 260 ಸ್ಥಳೀಯ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ದಿಯನ್ನು ಅನುಷ್ಠಾನಗೊಳಿಸಲಾಗುವುದು. ಮೇಲ್ದರ್ಜೆಗೆ ಏರಿದ ಪಟ್ಟಣ ಪಂಚಾಯತಿಗಳಿಗೆ ಎಸ್ ಎಫ್ ಸಿ ಅನುದಾನ ಬಿಡುಗಡೆ ಆಗಿದೆ. ಈ ಹಣ ಬಳಕೆ ನಂತರ ಮತ್ತಿತರ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಯುವರಾಜ ಕದಂ, ಮೋಹನ ರೆಡ್ಡಿ ರಾಜ ಸಲೀಂ ಖಾಶಿಮನವರ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಬಸವರಾಜ ಶೇಗಾವಿ, ಅಪ್ಪಾಸಾಬ ದೇಸಾಯಿ, ಮೀನಾಕ್ಷಿ ನೆಲಂಗಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
► Follow us on – Facebook / Twitter / Google+