ಕಾರಿಗೆ ಲಾರಿ ಡಿಕ್ಕಿ : ಉದ್ಯಮಿ ಸಾವು
ಚಿತ್ರದುರ್ಗ,ಅ.18-ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಉದ್ಯಮಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜವನಗೊಂಡನಹಳ್ಳಿ ಗ್ರಾಮದ ಬಳಿ ನಡೆದಿದೆ. ದಾವಣಗೆರೆ ಮೂಲದ ಬಾಲಾಜಿ(32) ಮೃತಪಟ್ಟ ಉದ್ಯಮಿ. ಬಾಲಾಜಿ ದಾವಣಗೆರೆಯ ಶಾಂತಲಾ ಸಿಲ್ಕ್ ಮತ್ತು ಜ್ಯುವೆಲರಿ ಅಂಗಡಿಯ ಮಾಲೀಕರಾಗಿದ್ದು , ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
► Follow us on – Facebook / Twitter / Google+