ಕಾರೆಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

Spread the love

huliyar-4

ಹುಳಿಯಾರು,ಫೆ.4-:  ಹೋಬಳಿಯ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಸ್ಥಾನದ ನೂತನ ಸ್ಥಿರಬಿಂಬ ವಿಗ್ರಹ ಪ್ರತಿಷ್ಠಾಪನೆ ಮತ್ತು ಮಹಾಕುಂಭಾಭಿಷೇಕ ಮಹೋತ್ಸವನ್ನು ಎರಡು ದಿನಗಳಿಂದ ಯಶಸ್ವಿಯಾಗಿ ನಡೆಯಿತು.ವೇದಬ್ರಹ್ಮ ಶ್ರೀ ಶ್ರೀಧರ್ ದೀಕ್ಷಿತ್ ಮತ್ತು ಸಂಗಡಿಗರಿಂದ ಗಂಗಾಪೂಜೆ, ಮಹಾಗಣಪತಿಪೂಜೆ, ಸ್ವಸ್ತಿ ಪುಣ್ಯಹವಾಚ್ಯ, ದೇವನಾಂದಿ, ಋತ್ವಿವರಣ, ಪಂಚಗವ್ಯ, ಶುದ್ದಿ, ರಕ್ಷಾಸೂತ್ರಧಾರಣ, ಮಂಟಪ ಪೂಜೆ, ವಾಸ್ತುಶಾಂತಿ, ವಾಸ್ತುಪರ್ಯಗಳಕರಣ, ಮೂದಲನೆ ಯಾಮ ಪೂಜೆ, ಕಳಶ ಪ್ರಾಣಪ್ರತಿಷ್ಠೆ, ಅಧಿವಾಸಗಳು, ಮೂದಲನೆ ಕಾಲದ ಹೋಮ, ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ಮತ್ತಿತರ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಅಷ್ಠಬಂದದಿಂದ ವಿಗ್ರಹ ಪ್ರತಿಷ್ಠಾಪನೆ, ಯಂತ್ರ ಸ್ಥಾಪನೆ, ನವರತ್ನ ಸ್ಥಾಪನೆ, ವನಧಾತುಗಳು, ಪಂಚಲೋಹಸ್ಥಾಪನೆ, ಗಣಪತಿ ಪ್ರಾರ್ಥನೆ, ಎರಡನೇ ಕಾಲದ ಯಾಮ ಪೂಜೆ, ಗಣಪತಿ ಪೂಜೆ, ನವಗ್ರಹ ಹೋಮ, ಅಷ್ಠದಿಕ್ಪಾಲಕ ಹೋಮ, ಮೃತ್ಯುಂಜಯ ಹೋಮ, ಪುರುಷ ಸೂಕ್ತಹೋಮ, ಶ್ರೀ ಲಕ್ಷ್ಮೀಹೋಮ, ಶ್ರೀಸುದರ್ಶನ ಹೋಮ, ಆಂಜನೇಯ ಹೋಮ, ಪ್ರದಾನ ದೇವತೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಹೋಮ, ನಾಡಿಸಂದಾನ, ನೇತ್ರೋನ್ಮಿಲನ, ದೀಪಧೇನು ದರ್ಶನ, ಸ್ವರ್ಶಾಹುತಿ, ಪ್ರಾಣ ಪ್ರತಿಷ್ಠೆ ನಡೆಸಲಾಯಿತು.ಶುಕ್ರವಾರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಸುವ ಮೂಲಕ ಎರಡು ದಿನಗಳ ಧಾರ್ಮಿಕ ಕೈಂಕರ್ಯಕ್ಕೆ ತೆರೆ ಎಳೆಯಲಾಯಿತು. ನೂತನ ವಿಗ್ರಹ ಮತ್ತು ಪ್ರತಿಷ್ಠಾಪನೆಯ ಸಂಪೂರ್ಣ ಕಾರ್ಯಕ್ರಮವನ್ನು ದಾನಿಗಳಾದ ಬೆಂಗಳೂರಿನ ಶಿವಮ್ಮ, ಡಾ.ಆರ್.ಕೃಷ್ಣಪ್ಪ, ಡಾ.ಕೆ.ರಂಗನಾಥ್, ಡಾ.ಮಮತ ಅವರು ನಡೆಸಿಕೊಟ್ಟರು.

ಕೋಲಾರ ಜಿಲ್ಲೆ ಮಾಲೂರಿನ ಕೆ.ಎಂ.ರಘುನಾಥ್ ಅವರು ನೂತನ ವಿಗ್ರಹ ಶಿಲ್ಪಿಗಳಾಗಿದ್ದಾರೆ. ಅಪಾರ ಸಂಖ್ಯೆಯ ಭಕ್ತರು ಎರಡೂ ದಿನವೂ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸುದ್ಧಿಗೆ ಸಂಬಂಧಿಸಿದ ಫೋಟೊವನ್ನು ಮೇಲ್‍ನಲ್ಲಿ ಕಳುಹಿಸಲಾಗಿದೆ  ಹುಳಿಯಾರು ಹೋಬಳಿಯ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಸ್ಥಾನದ ನೂತನ ಸ್ಥಿರಬಿಂಬ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ನಡೆದ ಪೂರ್ಣಾಹುತಿ. ಹುಳಿಯಾರು ಹೋಬಳಿಯ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡ ನೂತನ ಸ್ಥಿರಬಿಂಬ ವಿಗ್ರಹ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin