ಕಾರ್ಯಕರ್ತರನ್ನು ಬಿಡಿಸಲು ಠಾಣೆ ಮೇಲೆ ಭಜರಂಗಿಗಳ ದಾಳಿ, ವಾಹನಕ್ಕೆ ಬೆಂಕಿ, ಪೊಲೀಸರಿಗೆ ಗಾಯ

Spread the love

Agra

ಅಗ್ರಾ, ಏ.24- ಲಾಕಪ್‍ನಲ್ಲಿದ್ದ ತಮ್ಮ ಕಾರ್ಯಕರ್ತರನ್ನು ಬಿಡಿಸಲು ಭಜರಂಗದಳ ಕಾರ್ಯಕರ್ತರು ಆಗ್ರಾದ ಫತೇಪುರ್ ಸಿಕ್ರಿಯ ಸದರ್ ಬಜಾರ್ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸ್ ವಾಹನವೊಂದನ್ನು ಸುಟ್ಟುಹಾಕಿ ಕೆಲವು ಪೊಲೀಸರನ್ನು ಗಾಯಗೊಳಿಸಿದ್ದಾರೆ.  ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕಾಗಿ ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ (ವಿಎಚ್‍ಪಿ) ಕಾರ್ಯಕರ್ತರನ್ನು ಪೊಲೀಸರು ಬೆಳಗ್ಗೆ ಬಂಧಿಸಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಕಾರ್ಯಕರ್ತರ ಗುಂಪೊಂದು  ಠಾಣೆಗೆ ತೆರಳಿದಾಗ ಠಾಣಾಧಿಕಾರಿ ರವಿಕಾಂತ್ ಪರಾಶರ್ ಜೊತೆ ಮಾತಿನ ಚಕಮತಿ ನಡೆದು ಘರ್ಷಣೆಗೆ ಕಾರಣವಾಯಿತು. ನಂತರ ಉದ್ರಿಕ್ತ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿತ್ತು. ಷರ್ಷಣೆಯಲ್ಲಿ ಪೊಲೀಸರು ಗಾಯಗೊಂಡಿದ್ದಾರೆ.ಈ ಸಂಬಂಧ ಇನ್ನೂ ಕೆಲವರನ್ನು ಬಂಧಿಸಿ ಲಾಕಪ್‍ನಲ್ಲಿ ಇರಿಸಲಾಗಿತ್ತು. ಅವರನ್ನು ಬಿಡಿಸಲು ತಡರಾತ್ರಿ ಠಾಣೆ ಮೇಲೆ ಕಾರ್ಯಕರ್ತರು ಮತ್ತೆ ದಾಳಿ ಮಾಡಿ ಹಿಂಸಾಚಾರ ನಡೆಸಿದರು. ಈ ಸಂಬಂಧ 14 ಜನರನ್ನು ಬಂಧಿಸಲಾಗಿದ್ದು, ಸದರ್ ಬಜಾರ್ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಸಿದ್ದು, ಬಂದೋಬಸ್ತ್ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin