ಕಾವೇರಿ ತೀರ್ಪು ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ ..?

Spread the love

Siddaramaiah-01

ಬೆಂಗಳೂರು, ಫೆ.16-ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಇಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಜ್ಯದ ಪರವಾಗಿದ್ದು, ಕಾನೂನು ತಜ್ಞರ ಜೊತೆ ಸಮಾಲೋಚಿಸಿದ ನಂತರ ಪ್ರತಿಕ್ರಿಯೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ವಿಧಾನಸಭೆಯಲ್ಲಿಂದು ರಾಜ್ಯಸರ್ಕಾರದ ಬಜೆಟ್ ಮಂಡನೆಗೂ ಮುನ್ನ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಮಾಹಿತಿ ಪ್ರಕಾರ ರಾಜ್ಯದ ಪರವಾಗಿ ಸುಪ್ರೀಂ ತೀರ್ಪು ಬಂದಿದೆ. ತೀರ್ಪಿನ ಪೂರ್ಣ ಮಾಹಿತಿ ಪಡೆಯಬೇಕಿದೆ. ಜೊತೆಗೆ ತೀರ್ಪು ಕುರಿತಂತೆ ರಾಜ್ಯದ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ಆನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.  ಸದ್ಯಕ್ಕೆ ಪ್ರಾಥಮಿಕ ಮಾಹಿತಿಯಷ್ಟೇ ಲಭ್ಯವಾಗಿದ್ದು, ತೀರ್ಪಿನ ಹೆಚ್ಚಿನ ವಿವರ ಬಂದ ನಂತರ ರಾಜ್ಯದ ನಿಲುವೇನೆಂಬುದು ತಿಳಿಯಲಿದೆ ಎಂದರು.

Sri Raghav

Admin