ಕಾವೇರಿ ತೀರ್ಪು ರಾಜ್ಯದ ಪರ ಆಗಲಿದೆ : ಸುರೇಶ್ ವಿಶ್ವಾಸ

dk--suresh

ಆನೇಕಲ್, ಅ.26-ಕಾವೇರಿ ತೀರ್ಪು ನಮ್ಮ ರಾಜ್ಯದ ಪರ ಆಗುವ ಸಂಪೂರ್ಣ ನಂಬಿಕೆ ಇದೆ ಎಂದು ಬೆಂಗಳೂರು ಗ್ರಾಮಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಹೇಳಿದರು.ತಾಲೂಕಿನ ಮರಸೂರಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡು ಉತ್ತಮ ಕೆಲಸಗಳನ್ನು ಮಾಡುತ್ತಿದೆ,ಆಡಳಿತ ಪಕ್ಷದವರು ಟೀಕೆ ಮಾಡುವುದು ಸಾಮಾನ್ಯ,ಎಲ್ಲವನ್ನು ಸರಿದೂಗಿಸಿಕೊಂಡು ಮುಖ್ಯಮಂತ್ರಿಗಳು ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಎಂದರು.ಮಹದಾಯಿ ಯೋಜನೆಯ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿಗಳು ಹಿಂದಕ್ಕೆ ಸರಿದಿದ್ದು,ಮುಂದಿನ ದಿನಗಳಲ್ಲಿ ಕೇಂದ್ರದ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಚರ್ಚೆಯನ್ನು ನಡೆಸುತ್ತೇವೆ, ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.

ಸಾರಿಗೆ ಸಚಿವ ರಾಮಲಿಂಗರೆಡ್ಡಿರವರು ಸ್ಟೀಲ್ ಬ್ರಿಡ್ಜ್ ಕುರಿತು ಮಾತನಾಡಿ, ಹಿಂದೆ ಹೊಸೂರು ಮುಖ್ಯ ರಸ್ತೆಯಲ್ಲಿ ಪ್ಲೈ ಓವರ್ ರಸ್ತೆ ಮಾಡುವ ಸಂದರ್ಭದಲ್ಲಿ ತೊಂದರೆಯಾಗಬಹುದು ಎನ್ನಲಾಗಿತ್ತು ಆದರೆ ರಸ್ತೆ ಅತೀ ಬೇಗ ಕೆಲಸವಾಗಿದ್ದರಿಂದ ಇಂದು ಕೇವಲ ಅರ್ದ ಘಂಟೆಯಲ್ಲಿ ಮಡಿವಾಳಕ್ಕೆ ಹೋಗಬಹುಗಾಗಿದೆ. ಸ್ಟೀಲ್ ಬಿಡ್ಜ್ ಕಾಮಗಾರಿ ಟೆಂಡರ್‍ನಲ್ಲಿ ಲೋಪವಾಗಿದ್ದರೆ ಮರು ಟೆಂಡರ್ ಕರೆಯಲಿ ಅದನ್ನು ಬಿಟ್ಟು ಬ್ರಿಡ್ಜ್ ಮಾಡುವುದೇ ಬೇಡ ಎನ್ನುವುದು ಸರಿಯಲ್ಲ ಎಂದರು.ಶಾಸಕ ಬಿ.ಶಿವಣ್ಣ ಮಾತನಾಡಿ, ಆನೇಕಲ್ ತಾಲೂಕಿನಲ್ಲಿ ಅಭಿವ್ರದ್ದಿ ಕಾಮಗಾರಿಗಳೂ ಬರದಿಂದ ಸಾಗುತ್ತಿದೆ, ಜನರ ಭರವಸೆಗೆ ತಕ್ಕಂತೆ ಕೆಲಸಗಳು ನಡೆಯುತ್ತಿವೆ,ಸಾಮಾನ್ಯ ಮನುಷ್ಯನೂ ನೆಮ್ಮದಿಯಿಂದ ಬದುಕಬೇಕು ಎನ್ನುವುದು ನಮ್ಮ ಮೊದಲ ಆದ್ಯತೆ.

ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ರಸ್ತೆ,ಕುಡಿಯುವ ನೀರಿಗೆ ಜನರಿಗೆ ತೊಂದರೆಯಾಗದಂತೆ ಕೆಲಸ ಮಡಲಾಗುತ್ತಿದೆ ಎಂದರು.ಮರಸೂರು ಗ್ರಾಮ ಪಂಚಾಯತಿ ಅಧ್ಯಕ್ಷ  ಪುರಿಷೋತ್ತಮ ರೆಡ್ದಿ, ಜಿಲ್ಲಾ ಪಂಚಾಯತಿ ಸದಸ್ಯ ಬಂಡಾಪುರ ರಾಮಚಂದ್ರ ,ಪಂಚಾಯಿತಿ ಸದಸ್ಯರಾದ ಎಸ್.ಟಿ.ಡಿ. ರಮೇಶ್, ರಾದಕ್ಕ, ಚಂದ್ರಪ್ಪ,ರಮೇಶ್,ಗೌರಮ್ಮ,ಪ್ರೇಮ  ಕಾವೇರಪ್ಪ,ಎಮ್.ಕ್ರಷ್ಣಪ್ಪ, ಪ್ರಭಾಕರರೆಡ್ಡಿ,ಚಿಕ್ಕಮಾದರೆಡ್ಡಿ,ಲತಾ ಶ್ರೀನಿವಾಸ್,ಬಂಡಾಪುರ ರಮೇಶ್ ಮತ್ತಿತರರು ಇದ್ದರು.

 

► Follow us on –  Facebook / Twitter  / Google+

Sri Raghav

Admin