ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ರಾಜ್ಯ ಸಾರ್ಕರ ವಿರೋಧ

Spread the love

Cauvery-Supreme--Court

ಬೆಂಗಳೂರು, ಫೆ.17- ಕಾವೇರಿ ನದಿ ವಿವಾದ ಸಂಬಂಧಪಟ್ಟಂತೆ ನೀರು ನಿರ್ವಹಣಾ ಮಂಡಳಿ ರಚನೆಗೆ ರಾಜ್ಯ ಸಾರ್ಕರ ವಿರೋಧ ವ್ಯಕ್ತಪಡಿಸಲಿದೆ. ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರ ಕಾವೇರಿ ನದಿ ಪಾತ್ರದ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಪ್ರೀಂಕೋರ್ಟ್‍ನ ತೀರ್ಪಿನ ಕುರಿತು ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಮುಂಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ವಿಧಾನಸೌಧ ಮುಂಭಾಗ ವಿದ್ಯುತ್‍ಚಾಲಿತ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ಸುಪ್ರೀಂಕೋರ್ಟ್ ಇಂತಿಷ್ಟೇ ಕಾಲಾವಧಿಯಲ್ಲಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಸೂಚನೆ ನೀಡಲ್ಲ. ಸಾಮಾನ್ಯವಾಗಿ ನದಿ ವಿವಾದ ಇರುವ ಎಲ್ಲಾ ಪ್ರಕರಣಗಳಲ್ಲೂ ನೀರು ನಿರ್ವಹಣಾ ಮಂಡಳಿ ಅಥವಾ ಮೇಲುಸ್ತುವಾರಿ ಸಮಿತಿಗಳು ರಚನೆಯಾಗಿವೆ.

ಕಾವೇರಿ ನದಿ ವಿವಾದದಲ್ಲೂ ಈಗಾಗಲೇ ಮೇಲುಸ್ತಾವರಿ ಸಮಿತಿ ಇದೆ. ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿರುವುದು ನಿಜ. ಆದರೆ ಯಾವುದೇ ಕಾಲಮಿತಿ ಹಾಕಿಲ್ಲ. ನಾನು ನಮ್ಮ ವಕೀಲರ ಜತೆ ಮಾತನಾಡಿದ್ದೇನೆ. ಅವರು ಹೇಳಿದ ಪ್ರಕಾರ ಯಾವುದೇ ಕಾಲಮಿತಿ ಇಲ್ಲ. ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ ಎಂದು ಹೇಳಿದರು. ಸುಪ್ರೀಂಕೋರ್ಟ್ ಕಾವೇರಿ ವಿವಾದಲ್ಲಿ ನಾವು ಸಲ್ಲಿಸಿದ್ದ ಮನವಿಯಲ್ಲಿ ಭಾಗಶಃ ಅಂಶಗಳನ್ನು ಒಪ್ಪಿದೆ. ಕೆಲವು ಅಂಶಗಳನ್ನು ಒಪ್ಪಿಲ್ಲ. ಏನೇ ಆದರೂ ನಾವು ಕಾವೇರಿ ತೀರ್ಪನ್ನು ಸ್ವಾಗತಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಆಸ್ತಿಯ ಜತೆಗೆ ಆದಾಯದ ಮೂಲವನ್ನು ಘೋಷಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪುನ್ನು ಸ್ವಾಗತಿಸುತ್ತೇನೆ.
ಅಪ್ರಾಪ್ತ ಮಕ್ಕಳು ಮತ್ತು ಪತ್ನಿಯ ಆದಾಯ ವನ್ನು ಘೋಷಿಸಬೇಕೆಂದು ನ್ಯಾಯಾಲಯ ಹೇಳಿದೆ. ಅದಕ್ಕೆ ಅಭ್ಯಂತರವಿಲ್ಲ. ಆದಾಯದ ಮೂಲವನ್ನು ಘೋಷಿಸಲು ಸಿದ್ದ ಎಂದು ಸಿಎಂ ಸ್ಪಷ್ಟಪಡಿಸಿದರು.

Sri Raghav

Admin