ಕಾವೇರಿ ಹೋರಾಟಕ್ಕೆ ಅಮೆರಿಕದಿಂದ ನಟ ಪ್ರೇಮ್ ಬೆಂಬಲ (ವಿಡಿಯೋ)
ಸದ್ಯ ನಾನು ಅಮೆರಿಕ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿರುವ ನಟ ಪ್ರೇಮ್ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ‘ದಯಮಾಡಿ ನನ್ನನ್ನು ಕ್ಷಮಿಸಿ, ರೈತರ ನೋವು ನನಗೆ ಗೊತ್ತು, ಪ್ರವಾಸದಲ್ಲಿರುವುದರಿಂದ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಬಹುಬೇಗನೆ ನಿಮ್ಮ ಜೊತೆ ಬಂದು ಪಾಲ್ಗೊಳ್ಳುತ್ತೇನೆ’ ಎಂದು ನಟ ಪ್ರೇಮ್ ತಿಳಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸ್ನೇಹಿತರಿಗೆ ಮಂಡ್ಯ ರೈತರಿಗೆ ಅಪ್ಲೋಡ್ ಮಾಡಿ ಕಾವೇರಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.